Thursday, June 4, 2026
Homeಕರಾವಳಿಪಾಣೆಮಂಗಳೂರು: ಎಸ್ಸೆಸ್ಸೆಫ್, ಎಸ್ ವೈಎಸ್ ವತಿಯಿಂದ 400 ಕುಟುಂಬಗಳಿಗೆ ಕಿಟ್ ವಿತರಣೆ

ಪಾಣೆಮಂಗಳೂರು: ಎಸ್ಸೆಸ್ಸೆಫ್, ಎಸ್ ವೈಎಸ್ ವತಿಯಿಂದ 400 ಕುಟುಂಬಗಳಿಗೆ ಕಿಟ್ ವಿತರಣೆ

- Advertisement -
- Advertisement -

ಪಾಣೆಮಂಗಳೂರು: ಲಾಕ್’ಡೌನ್ ಆರಂಭದಿಂದಲೇ ತುರ್ತುಸೇವೆ ಮತ್ತು ಸಾಂತ್ವನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಪಾಣೆಮಂಗಳೂರು ಎಸ್ಸೆಸ್ಸೆಫ್ ಕ್ಯೂ ಟೀಮ್ ಮತ್ತು ಎಸ್ ವೈಎಸ್ ಇಸ್ವಾಬ ಇದರ ಮುಂದುವರಿದ ಭಾಗವಾಗಿ ಸೆಕ್ಟರ್ ವ್ಯಾಪ್ತಿಯ 400 ಕುಟುಂಬಗಳಿಗೆ ಮೂರು ಹಂತದಲ್ಲಿ ರಿಲೀಫ್ ಕಿಟ್ ವಿತರಿಸಿದೆ.

ಮೊದಲು 200 ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳು, ನಂತರ 150 ಕುಟುಂಬಗಳಿಗೆ ರಮಳಾನ್ ಕಿಟ್ ಮತ್ತು ಇದೀಗ 50 ಸಕ್ರಿಯ ಕಾರ್ಯಕರ್ತರ ಕುಟುಂಬಗಳಿಗೆ ರಮಳಾನ್ ಕಿಟ್ ವಿತರಣೆ ನಡೆದಿದೆ. ಇದಲ್ಲದೆ ಹಲವು ಕುಟುಂಬಗಳ ಕರೆಗೆ ಸ್ಪಂದಿಸುತ್ತಾ ತಕ್ಷಣ ಆಹಾರ ಸಾಮಾಗ್ರಿಗಳನ್ನು ಪೂರೈಸಿಲಾಗಿದೆ. ತುರ್ತುಸೇವಕರು ವಾಟ್ಸಾಪ್ ಗ್ರೂಪ್’ನ ಸಹಕಾರದೊಂದಿಗೆ ತಮ್ಮ ರಿಲೀಫ್ ಕೆಲಸವನ್ನು ಇನ್ನೂ ಮುಂದುವರಿಸುವ ಯೋಜನೆ ರೂಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

- Advertisement -

Latest News

error: Content is protected !!