- Advertisement -
![]()
- Advertisement -
ಕೊಚ್ಚಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ 698 ಮಂದಿ ಭಾರತೀಯರನ್ನು ಭಾರತೀಯ ನೌಕಾದಳದ ಯುದ್ಧ ನೌಕೆ ‘ಐಎನ್‌ಎಸ್ ಜಲಾಶ್ವ’ ಇಂದು ಕೊಚ್ಚಿ ಬಂದರಿಗೆ ಬಂದರಿನಲ್ಲಿ ತಂದಿಳಿಸಿದೆ.
ಮಾಲ್ಡೀವ್ಸ್‌ನಿಂದ ಹೊರಟ ಐಎನ್‌ಎಸ್ ಜಲಾಶ್ವ ಭಾನುವಾರ ಬೆಳಗ್ಗೆ ಕೇರಳದ ಕೊಚ್ಚಿ ಬಂದರನ್ನು ತಲುಪಿದ್ದು, 698 ಪ್ರಜೆಗಳು ತಾಯ್ನಾಡಿಗೆ ಮರಳಿದ್ದಾರೆ. ಇದರಲ್ಲಿ 400 ಮಂದಿ ಕೇರಳದವರಾಗಿದ್ದು, ಉಳಿದ 200 ಮಂದಿ ದೇಶದ ಇತರ ಭಾಗಕ್ಕೆ ಸೇರಿದವರಾಗಿದ್ದಾರೆ.
ಈ 200 ಮಂದಿಯ ಪೈಕಿ 4 ಮಂದಿ ಲಕ್ಷ ದ್ವೀಪದವರಾಗಿದ್ದು, 187 ಮಂದಿ ತಮಿಳುನಾಡು ಮೂಲದವರಾಗಿದ್ದಾರೆ. ತೆಲಂಗಾಣದ 9, ಆಂಧ್ರ ಪ್ರದೇಶದ 8, ಹರಿಯಾಣ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ತಲಾ 3 ಮಂದಿ, ಗೋವಾ ಮತ್ತು ಅಸ್ಸಾಂನವರಾಗಿದ್ದಾರೆ.
- Advertisement -


