Thursday, May 2, 2024
HomeWorldಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಮನೆಯಿಂದ ಮೇಕೆ ಕಳವು: ಬಕ್ರೀದ್​ ಹಬ್ಬಕ್ಕೆ ಬಲಿಕೊಡಲು ತಂದಿದ್ದ...

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಮನೆಯಿಂದ ಮೇಕೆ ಕಳವು: ಬಕ್ರೀದ್​ ಹಬ್ಬಕ್ಕೆ ಬಲಿಕೊಡಲು ತಂದಿದ್ದ ಮೇಕೆ

spot_img
- Advertisement -
- Advertisement -

ಈದ್-ಉಲ್ ಅಧಾ ಅಥವಾ ಬಕ್ರೀದ್ ಪ್ರಯುಕ್ತ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮಾನ್ ಅಕ್ಕಲ್ ಹಬ್ಬಕ್ಕಾಗಿ ಬಲಿಕೊಡಲು ತಂದಿದ್ದ ಮೇಕೆಯನ್ನು ಲಾಹೋರ್‌ನಲ್ಲಿರುವ ಅವರ ಮನೆಯ ಹೊರಗಿನಿಂದ ಬಕ್ರೀದ್ ಹಬ್ಬದ ಮುನ್ನವೇ ಕಳವು ಮಾಡಲಾಗಿದೆ.

ಬಕ್ರೀದ್ ಅಥವಾ ಈದ್-ಉಲ್-ಅಧಾ ದಿನದಂದು ಮೇಕೆ, ಕುರಿ, ಹಸು ಅಥವಾ ಒಂಟೆಯಾಗಿರಲಿ ಪ್ರಾಣಿಗಳನ್ನು ಬಲಿಕೊಡುತ್ತಾರೆ. ಆದರೆ ಕಳ್ಳತನದ ವಿಚಾರ ತಿಳಿಯುತ್ತಿದ್ದಂತೆ ಅಕ್ಕಲ್ ಕುಟುಂಬಸ್ಥರಿಗೆ ಆಘಾತವಾಗಿದೆ. ಪ್ರಾಣಿಗಳನ್ನು ಬಲಿಕೊಡುವುದು ಹಜರತ್ ಇಬ್ರಾಹಿಂ (ಎಎಸ್) ಅವರ ಸುನ್ನತ್ ಅನ್ನು ನಿರ್ವಹಿಸುವ ಮಾರ್ಗವಾಗಿದೆ ಇದನ್ನು ಜುಲೈ 10 ರಂದು ಭಾನುವಾರ ಆಚರಿಸಲಾಗುತ್ತದೆ ಆದರೆ ಹಬ್ಬಕ್ಕೆ ಮೂರು ದಿನಗಳ ಮೊದಲು, ಅಕ್ಕಲ್ ಮನೆಯವರು ಮೇಕೆಯನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಹಲವು ಮುಸ್ಲಿಂ ಕುಟುಂಬಗಳು ಮಾರುಕಟ್ಟೆಗೆ ಭೇಟಿ ನೀಡಿ ಒಂದು ವಾರ ಮುಂಚಿತವಾಗಿ ಬಲಿ ಕೊಡಲು ಪ್ರಾಣಿಗಳನ್ನು ಖರೀದಿಸುತ್ತಾರೆ. ಹಬ್ಬದ ದಿನ ಸಮೀಪಿಸುತ್ತಿದ್ದಂತೆ ಪ್ರಾಣಿಗಳಿಗೆ ಬೇಡಿಕೆಯೂ ಹೆಚ್ಚಾಗುತ್ತದೆ. ಕಮ್ರಾನ್ ಅಹ್ಮಲ್ ತಂದೆ ಕೂಡ ಆರು ಮೇಕೆಗಳನ್ನು ಮುಂಗಡವಾಗಿ ಖರೀದಿಸಿದ್ದು, ಆದರೆ ಅದರಲ್ಲಿ ಒಂದು ಮೇಕೆಯನ್ನು ಗುರುವಾರ ರಾತ್ರಿ ಕಳೆದುಕೊಂಡಿದ್ದಾರೆ.

ಇನ್ನು ಮೇಕೆ ಕಳ್ಳತನವಾಗಿರುವ ಬಗ್ಗೆ ಇದೀಗ ಕುಟುಂಬಸ್ಥರು ವಾಸವಾಗಿರುವ ಖಾಸಗಿ ಹೌಸಿಂಗ್ ಸೊಸೈಟಿಯ ಭದ್ರತಾ ವಿಭಾಗದವರಿಗೆ ತಿಳಿಸಿದ್ದಾರೆ. ಮೇಕೆ ಕದ್ದ ಕಳ್ಳರಿಗಾಗಿ ಹುಡುಕಾಟವು ನಡೆದಿದೆ. ಪ್ರಾಣಿಯನ್ನು ನೋಡಿಕೊಳ್ಳುವ ಜವಾಬ್ದಾರ ತಮ್ಮ ಸೇವಕ ರಾತ್ರಿಯಲ್ಲಿ ಮಲಗಿದ್ದಾಗ ಮೇಕೆಯನ್ನು ಕಳವು ಮಾಡಲಾಗಿದೆ ಎಂದು ಅವರು ಕಮ್ರಾನ್ ಅಹ್ಮಲ್ ಕುಟುಂಬದವರು ಹೇಳಿದ್ದಾರೆ. ಮೇಕೆಯನ್ನು 90,000 ರೂಪಾಯಿ ನೀಡಿ ಖರೀದಿಸಿದ್ದು, ಉತ್ತಮವಾದ ಮೇಕೆಯನ್ನೇ ಕಳ್ಳರು ಕದ್ದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ, ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿರುವ ಕಮ್ರಾನ್ ಅಹ್ಮಲ್ ಚಾನೆಲ್‌ನಲ್ಲಿ ಪ್ರಪಂಚದಾದ್ಯಂತ ನಡೆಯುತ್ತಿರುವ ವಿವಿಧ ಕ್ರಿಕೆಟ್ ಪಂದ್ಯಗಳ ಬಗ್ಗೆ ತನ್ನ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. ಕಮ್ರಾನ್ ಪಾಕಿಸ್ತಾನದ ದೇಶೀಯ ಕ್ರಿಕೆಟ್‌ನಲ್ಲಿ ಮತ್ತು ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಆಡುವುದನ್ನು ಮುಂದುವರೆಸಿದ್ದು, ಅವರು ಪೇಶಾವರ್ ಝಲ್ಮಿ ತಂಡದ ಆಟಗಾರನಾಗಿ ಕಣಕ್ಕಿಳಿಯುತ್ತಾರೆ.

ಮ್ರಾನ್ ಅಹ್ಮಲ್ ವಯಸ್ಸಿನ ವಿಚಾರದಿಂದ ಬ್ಯಾಟಿಂಗ್‌ನಲ್ಲಿ ಅವರ ಉತ್ತಮ ಪ್ರದರ್ಶನದ ಹೊರತಾಗಿಯೂ, ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗಿದ್ದಾರೆ. ಜೊತೆಗೆ ಪಾಕಿಸ್ತಾನ ತಂಡದಲ್ಲಿ ಸಾಕಷ್ಟು ವಿಕೆಟ್‌ಕೀಪರ್‌ಗಳು ಮತ್ತು ಬ್ಯಾಟರ್‌ಗಳಿದ್ದಾರೆ ಮೊಹಮ್ಮದ್ ರಿಜ್ಞಾನ್ ಎಲ್ಲಾ ಸ್ವರೂಪಗಳಲ್ಲಿ ವಿಕೆಟ್ ಕೀಪ್ ಮಾಡುತ್ತಿದ್ದರೆ, ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಕೂಡ ಕೀಪರ್ ಆಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

- Advertisement -
spot_img

Latest News

error: Content is protected !!