Wednesday, June 24, 2026
HomeWorldಅಫ್ಘಾನಿಸ್ತಾನದ ಆಸ್ಪತ್ರೆ ಮೇಲೆ ಪಾಕಿಸ್ತಾನದಿಂದ ವಾಯುದಾಳಿ; 400 ಮಂದಿ ಮೃತ್ಯು

ಅಫ್ಘಾನಿಸ್ತಾನದ ಆಸ್ಪತ್ರೆ ಮೇಲೆ ಪಾಕಿಸ್ತಾನದಿಂದ ವಾಯುದಾಳಿ; 400 ಮಂದಿ ಮೃತ್ಯು

- Advertisement -
- Advertisement -

ಪಾಕಿಸ್ತಾನ ಪಡೆಗಳು ಮಾದಕ ವ್ಯಸನಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ನಗರದ ಆಸ್ಪತ್ರೆಯೊಂದರ ಮೇಲೆ ವಾಯು ದಾಳಿ ನಡೆಸಿದೆ.

ಈ ವಾಯುದಾಳಿಯಲ್ಲಿ ಕನಿಷ್ಠ 400 ಮಂದಿ ಮೃತಪಟ್ಟು ಇತರ 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಪ್ರಕಟಿಸಿದೆ.

ಈ ಆರೋಪವನ್ನು ಪಾಕಿಸ್ತಾನ ನಿರಾಕರಿಸಿದ್ದು, ಪೂರ್ವ ಅಫ್ಘಾನಿಸ್ತಾನದಲ್ಲಿ ಸೇನೆ ಮತ್ತು ಭಯೋತ್ಪಾದನಾ ಕೇಂದ್ರಗಳನ್ನು ಗುರಿ ಮಾಡಿ ಮಾತ್ರವೇ ವಾಯುದಾಳಿ ನಡೆದಿದೆ ಎಂದು ಹೇಳಿಕೊಂಡಿದೆ.

ಆರೋಗ್ಯ ಸಚಿವಾಲಯ ವಕ್ತಾರ ಶರಾಫತ್ ಝಮಾನ್, ಸ್ಥಳೀಯ ಮಾಧ್ಯಮದ ಜತೆಗಿನ ಟಿವಿ ಸಂದರ್ಶನದಲ್ಲಿ ಸಾವು ನೋವಿನ ವಿವರ ನೀಡಿದ್ದು, ಮಾದಕ ವ್ಯಸನಿಗಳ ಚಿಕಿತ್ಸಾ ಆಸ್ಪತ್ರೆ ಸಂಪೂರ್ಣ ಧ್ವಂಸವಾಗಿದೆ ಎಂದು ಹೇಳಿದ್ದಾರೆ.

ಇನ್ನು ಉಪ ಸರ್ಕಾರಿ ವಕ್ತಾರ ಹಮಾದುಲ್ ಫಿತ್ರಾತ್ ಅವರ ಪ್ರಕಾರ, ಸಾವಿನ ಸಂಖ್ಯೆ 400ನ್ನು ದಾಟಿದೆ ಹಾಗೂ 250 ಮಂದಿ ಗಾಯಗೊಂಡಿದ್ದಾರೆ.

- Advertisement -

Latest News

error: Content is protected !!