Wednesday, June 24, 2026
Homeಕರಾವಳಿಚೆಕ್ ಬೌನ್ಸ್ ಪ್ರಕರಣ; ಸ್ಯಾಂಡಲ್ ವುಡ್ ನ ಹಿರಿಯ ನಟಿ, ಭಾಗ್ಯಲಕ್ಷ್ಮೀ ಧಾರಾವಾಹಿ ಖ್ಯಾತಿಯ ಪದ್ಮಜಾ...

ಚೆಕ್ ಬೌನ್ಸ್ ಪ್ರಕರಣ; ಸ್ಯಾಂಡಲ್ ವುಡ್ ನ ಹಿರಿಯ ನಟಿ, ಭಾಗ್ಯಲಕ್ಷ್ಮೀ ಧಾರಾವಾಹಿ ಖ್ಯಾತಿಯ ಪದ್ಮಜಾ ರಾವ್ ಗೆ 40 ಲಕ್ಷ ದಂಡ ಹಾಗೂ 3 ತಿಂಗಳು ಜೈಲು ಶಿಕ್ಷೆ

- Advertisement -
- Advertisement -

ಬೆಂಗಳೂರು;ಚೆಕ್ ಬೌನ್ಸ್ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನ ಹಿರಿಯ ನಟಿ, ಭಾಗ್ಯಲಕ್ಷ್ಮೀ ಧಾರಾವಾಹಿ ಖ್ಯಾತಿಯ ಪದ್ಮಜಾ ರಾವ್ ಗೆ 40 ಲಕ್ಷ ದಂಡ ಹಾಗೂ 3 ತಿಂಗಳು ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ.

ಮಂಗಳೂರಿನ ವೀರೂ ಟಾಕೀಸ್ ಸಂಸ್ಥೆ ಮಾಲೀಕ ವೀರೇಂದ್ರ ಶೆಟ್ಟಿ ಅವರಿಂದ ನಟಿ ನಟಿ ಪದ್ಮಜಾ ರಾವ್‌ ಅವರು ₹ 40 ಲಕ್ಷ ಕೈ ಸಾಲ ಪಡೆದಿದ್ದರು. ಇದಕ್ಕೆ ಭದ್ರತೆಯಾಗಿ 2020ರ ಜೂನ್‌ 17ರಂದು ಐಸಿಐಸಿಐ ಬ್ಯಾಂಕಿನ ಬೆಂಗಳೂರಿನ ಬನಶಂಕರಿ ಶಾಖೆಯಲ್ಲಿರುವ ತಮ್ಮ ಖಾತೆಗೆ ಸಂಬಂಧಿಸಿದ ಚೆಕ್‌ ನೀಡಿದ್ದರು.

ವೀರೇಂದ್ರ ಶೆಟ್ಟಿ ಬಳಿಕ ಚೆಕ್‌ ಅನ್ನು ನಗದೀಕರಿಸಲು ಬ್ಯಾಂಕ್ ಗೆ ಹಾಕಿದಾಗ, ಪದ್ಮಜಾ ರಾವ್ ಅವರ ಖಾತೆಯಲ್ಲಿ ಅಷ್ಟೊಂದು ಮೊತ್ತ ಇರಲಿಲ್ಲ ಎಂದು ಚೆಕ್ ಬೌನ್ಸ್ ಆಗಿತ್ತು. ಬಳಿಕ ವೀರೇಂದ್ರ ಶೆಟ್ಟಿ ಅವರು 15 ದಿನಗಳ ಒಳಗೆ ಸಾಲದ ಹಣ ಪಾವತಿಸುವಂತೆ ‌2020ರ ಜೂನ್ 30ರಂದು ಪದ್ಮಜಾ ರಾವ್‌ ಅವರಿಗೆ ನೋಟಿಸ್‌ ನೀಡಿದರೂ ಅವರು ಹಣ ಪಾವತಿಸಿರಲಿಲ್ಲ. ಬಳಿಕ ಅವರು ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.ಸಮನ್ಸ್‌ ಜಾರಿಯಾದ ಬಳಿಕ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಪದ್ಮಜಾ ರಾವ್‌ ಅವರು ‘ನಾನು ದೂರುದಾರರಿಂದ ಯಾವುದೇ ಸಾಲ ಪಡೆದಿಲ್ಲ ಹಾಗೂ ಅವರಿಗೆ ಯಾವುದೇ ಚೆಕ್‌ ನೀಡಿಲ್ಲ’ ಎಂದು ಹೇಳಿಕೆ ನೀಡಿದ್ದರು.

‘₹52.70 ಲಕ್ಷ ವಂಚನೆ ಮಾಡಿದ ಬಗ್ಗೆ ವೀರೇಂದ್ರ ಶೆಟ್ಟಿ ವಿರುದ್ಧ ಬೆಂಗಳೂರಿನ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ 2020 ಮಾರ್ಚ್‌ 23ರಂದು ದೂರು ದಾಖಲಿಸಿದ್ದಕ್ಕೆ ಪ್ರತಿಯಾಗಿ ತಮ್ಮ ಕಕ್ಷಿದಾರರ ವಿರುದ್ಧ ಈ ಆರೋಪ ಮಾಡಿದ್ದಾರೆ. ಅವರ ಮನೆಯಿಂದ ಚೆಕ್‌ ಕಳವು ಮಾಡಿ ಸಹಿಯನ್ನು ಪೋರ್ಜರಿ ಮಾಡಲಾಗಿದೆ’ ಎಂದು ಪದ್ಮಜಾ ರಾವ್‌ ಪರ ವಕೀಲರು ವಾದಿಸಿದ್ದರು. ಆದರೆ, ಇದಕ್ಕೆ ಪೂರಕ ಪುರಾವೆಗಳನ್ನು ಒದಗಿಸುವಲ್ಲಿ ಅವರು ವಿಫಲರಾಗಿದ್ದರು.

8ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಫವಾಜ್‌ ಪಿ.ಎ ಅವರು, ‘ಪದ್ಮಜಾ ರಾವ್‌ ಅವರು ₹ 40.20 ಲಕ್ಷ ದಂಡ ಪಾವತಿಸಬೇಕು. ಅದರಲ್ಲಿ ₹ 40.17 ಲಕ್ಷವನ್ನು ದೂರುದಾರರಿಗೆ ನೀಡಬೇಕು. ಹಾಗೂ ₹ 3 ಸಾವಿರವನ್ನು ಸರ್ಕಾರಕ್ಕೆ ಪಾವತಿಸಬೇಕು’ ಎಂದು ತೀರ್ಪು ನೀಡಿದ್ದಾರೆ.

- Advertisement -

Latest News

error: Content is protected !!