Wednesday, April 24, 2024
Homeಆರಾಧನಾಪಡಂಗಡಿ ರಕ್ತೇಶ್ವರಿ ದೈವಸ್ಥಾನದಲ್ಲಿ ಪ್ರತಿಷ್ಠೆ ಮತ್ತು ನೇಮೋತ್ಸವ

ಪಡಂಗಡಿ ರಕ್ತೇಶ್ವರಿ ದೈವಸ್ಥಾನದಲ್ಲಿ ಪ್ರತಿಷ್ಠೆ ಮತ್ತು ನೇಮೋತ್ಸವ

spot_img
- Advertisement -
- Advertisement -

ಬೆಳ್ತಂಗಡಿ: ಪಡಂಗಡಿ ಗ್ರಾಮದ ಲಾಡಿ ಶ್ರೀ ರಕ್ತೇಶ್ವರಿ ದೈವ ಸ್ಥಾನದಲ್ಲಿ ಸಪರಿವಾರ-ರಕ್ತೇಶ್ವರಿ, ಮೈಸಂದಾಯ, ವ್ಯಾಘ್ರ-ಚಾಮುಂಡಿ ದೈವಗಳ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವವು ಮೇ 17 ರಿಂದ 18 ರವರೆಗೆ ನಡೆಯಲಿದೆ.


ಕ್ಷೇತ್ರದಲ್ಲಿ ಮೇ 17 ರಂದು ಬೆಳಿಗ್ಗೆ 8 ರಿಂದ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಪುಣ್ಯಾಹವಾಚನ, ದ್ವಾದಶ ನಾಳಿಕೇರ ಗಣಯಾಗ, ನವಗ್ರಹ ಪೂಜೆ ಸಾಯಂಕಾಲ ಗಂಟೆ 5 ರಿಂದ ವಾಸ್ತುಹೋಮ, ಬಲಿ, ರಾಕೋಘ್ನ ಹೋಮ, ದಿಕ್ಷಾಲ ಬಲಿ, ಆದಿವಾಸ ಪೂಜೆ, ಪ್ರಸಾದ ಶುದ್ಧಿ ಹಾಗೂ ಆಶ್ಲೇಷ ಬಲಿ ನಡೆಯಲಿದ್ದು, ಮೇ18 ರಂದು ಬೆಳಿಗ್ಗೆ 7 ಗಂಟೆಯಿಂದ ಚಂಡಿಕಾಯಾಗ, ಪಂಚವಿಂಶತಿ ಕಲಶಪೂಜೆ, ಪ್ರತಿಷ್ಠಾ ಪ್ರಧಾನ ಹೋಮ, ದೈವಗಳ ಪ್ರತಿಷ್ಠೆ ನಡೆಯಲಿದೆ.


ಮಧ್ಯಾಹ್ನ 12ಕ್ಕೆಯಾಗದ ಪೂರ್ಣಾಹುತಿ, ಪ್ರಸಾದ ವಿತರಣೆ, ರಾತ್ರಿ 8 ಗಂಟೆಗೆ ಮೈಸಂದಾಯ, ರಕ್ರೇಶ್ವರಿ ದೈವಗಳ ಗಗ್ಗರ ಸೇವೆ, ವ್ಯಾಘ್ರ ಚಾಮುಂಡಿ ದೈವದ ಗಗ್ಗರ ಸೇವೆ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!