Friday, June 5, 2026
Homeಕರಾವಳಿಮಂಗಳೂರು: ಪಚ್ಚನಾಡಿ ಡಂಪಿಂಗ್ ಯಾರ್ಡ್ ಪರಿಸರದಲ್ಲಿ ಏಕಾಏಕಿ ಬೆಂಕಿ

ಮಂಗಳೂರು: ಪಚ್ಚನಾಡಿ ಡಂಪಿಂಗ್ ಯಾರ್ಡ್ ಪರಿಸರದಲ್ಲಿ ಏಕಾಏಕಿ ಬೆಂಕಿ

- Advertisement -
- Advertisement -

ಮಂಗಳೂರು: ನಗರದ ಪಚ್ಚನಾಡಿ ಡಂಪಿಂಗ್ ಯಾರ್ಡ್ ಪರಿಸರದಲ್ಲಿ ಬೆಂಕಿ ಬಿದ್ದಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಇಂದು ಬೆಳಿಗ್ಗೆ 10.30ರ ಸುಮಾರಿಗೆ ಏಕಾಏಕಿ ಬೆಂಕಿ ಹತ್ತಿಕೊಂಡಿದ್ದು, ೨ ರಿಂದ 3 ಎಕರೆ ಪ್ರದೇಶದ ಹುಲ್ಲು ನಾಶವಾಗಿದೆ.

ಇಲ್ಲೇ ಹತ್ತಿರದಲ್ಲಿ ಡಂಪಿಂಗ್ ಯಾರ್ಡ್ ಇದ್ದು ಇದರಿಂದಲೇ ಬೆಂಕಿ ಹಿಡಿದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ.

ಪ್ರತೀ ವರ್ಷವೂ ಬಿಸಿಲಿನ ಪ್ರಖರತೆಗೆ ಇಲ್ಲಿ ಬೆಂಕಿ ಬೀಳುತ್ತಿದ್ದು, ಪರಿಸರದ ಜನತೆ ದಟ್ಟ ಹೊಗೆ ಮತ್ತು ವಾಸನೆಯಿಂದ ಕಂಗೆಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಷ್ಟೇ ಅಲ್ಲದೆ ಹೊರಭಾಗದ ತ್ಯಾಜ್ಯವನ್ನು ಕೂಡಾ ಇಲ್ಲಿ ತಂದು ಸುರಿಯಲಾಗುತ್ತಿದ್ದು, ಇಂತಹ ತ್ಯಾಜ್ಯ ಬಿಸಿಲಿಗೆ ಒಣಗಿ ಅದರ ಶಾಖದ ತೀವ್ರತೆಗೆ ಬೆಂಕಿ ಬೀಳುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

- Advertisement -

Latest News

error: Content is protected !!