ಉಡುಪಿ: ಜಿಲ್ಲೆಯಲ್ಲೂ ಶಾಲೆಗಳನ್ನು ಪ್ರಾರಂಭಿಸಬೇಕಾದ್ದರಿಂದ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಕೋವಿಡ್ ಟೆಸ್ಟ್ ಮಾಡುವುದರ ಜೊತೆಗೆ ಈ ತಿಂಗಳ ಅಂತ್ಯಕ್ಕೆ ಕೊರೋನಾ ಪಾಸಿಟಿವಿಟಿ ಪ್ರಮಾಣ ಶೇ.2ಕ್ಕಿಂತ ಕಡಿಮೆ ತರಬೇಕೆನ್ನುವುದು ನಮ್ಮ ಗುರಿಯಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ರವರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಪ್ರತಿದಿನ 3000 ಟೆಸ್ಟಿಂಗ್ ಮಾಡುತ್ತಿದ್ದು, 6000 ದಿಂದ 7000ದ ವರೆಗೆ ಹೆಚ್ಚಿಸಲಾಗಿದೆ. ಇನ್ನು 10000ವರೆಗೆ ಟೆಸ್ಟಿಂಗ್ ಮಾಡಿಸಬೇಕಾಗಿದೆ. ಅಗಸ್ಟ್ ತಿಂಗಳ ಅಂತ್ಯಕ್ಕೆ ಶೇ 2% ಕೆಳಗೆ ಬರಬೇಕಾಗಿದೆ. ಆ ನಿಟ್ಟಿನಲ್ಲಿ ಕಾರ್ಯಚರಣೆ ಮಾಡಲು ಎಲ್ಲ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ವೈದ್ಯರಿಗೆ ಸೂಚನೆ ನೀಡಲಾಗಿದೆ, ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಅದನ್ನ ಗಮನಿಸುತ್ತಿದ್ದು, ಅಗಸ್ಟ್30 ರೊಳಗೆ ಕೊರೊನಾ ಪಾಸಿಟಿವ್ ದರ 2% ಕೆಳಗೆ ಬಂದರೆ ಸರಕಾರವನ್ನ ಶಾಲೆ ಆರಂಭಿಸುವಂತೆ ನಾವು ಕೇಳಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪಾಸಿಟಿವಿಟಿ ಶೇ. ಎರಡಕ್ಕಿಂತ ಕಡಿಮೆ ದಾಖಲಾದರೆ ಜಿಲ್ಲೆಯಲ್ಲಿ ಎಲ್ಲಾ ಶಾಲಾ ಮಕ್ಕಳು ತಮ್ಮ ವಿದ್ಯಾರ್ಜನೆ ಮುಂದುವರಿಸಲು ಸಾಧ್ಯವಾಗುತ್ತದೆ, ಆದ್ದರಿಂದ ಜಿಲ್ಲೆ ಜನರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಮನವಿ ಮಾಡಿದರು
ಇನ್ನು ಅಲ್ಲಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಆಗುತ್ತಿದೆ. ನಿಯಮ ಉಲ್ಲಂಘನೆಯಾಗುವುದನ್ನು ತಡೆ ಮಾಡಿದರೆ ಕೋವಿಡ್ ನಿಯಂತ್ರಣ ಮಾಡಲು ಸಾಧ್ಯ ಅಂತ ತಜ್ಞರ ಸಮಿತಿ ಸಭೆ ಕರೆದಾಗ ಉಲ್ಲಂಘನೆಯಾಗುವುದನ್ನು ಆದಷ್ಟು ಕಡಿಮೆ ಮಾಡಬೇಕು ಎಂದು ಹೇಳಿದ್ದಾರೆ. ಮಾಸ್ಕ್ ಹಾಕುವುದಕ್ಕೆ ಬಹಳಷ್ಟು ಕಡೆ ನಿರ್ಲಕ್ಷ್ಯ ಕಂಡು ಬರುತ್ತಿದೆ. ಆದ್ದರಿಂದ ಕೋವಿಡ್ ಟೆಸ್ಟ್ ಕಡ್ಡಾಯ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ ಎಂದರು.
ವ್ಯಾಕ್ಸಿನ್ ನೀಡುವುದರಲ್ಲಿ ರಾಜ್ಯದಲ್ಲಿ ಉಡುಪಿ ಎರಡನೇ ಸ್ಥಾನದಲ್ಲಿದೆ. ಸುಮಾರು 64 ಶೇ. 60 ವರ್ಷ ಮೇಲ್ಪಟ್ಟವರಿಗೆ ಸಹಿತ ಶೇ. 85 ವ್ಯಾಕ್ಸಿನ್ ನೀಡಲಾಗಿದೆ. ಇನ್ನುಳಿದ ಶೇ.15 ಜನರಿಗೆ ಜಿಲ್ಲಾಡಳಿತವೇ ಮನೆಮನೆಗೆ ಹೋಗಿ ವ್ಯಾಕ್ಸಿನ್ ನೀಡುವ ಗುರಿ ಹೊಂದಿದ್ದಾಗಿ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಧ್ಯಮಕ್ಕೆ ಮಾಹಿತಿ ನೀಡಿದರು.