Monday, June 8, 2026
Homeಕರಾವಳಿಉಡುಪಿಮಣಿಪಾಲ: ಸಾವಿನಲ್ಲೂ ಸಾರ್ಥಕತೆ ಮೆರೆದ ನವೀನ: ಆರು‌ ಜನರಿಗೆ ಅಂಗಾಂಗ ದಾನ

ಮಣಿಪಾಲ: ಸಾವಿನಲ್ಲೂ ಸಾರ್ಥಕತೆ ಮೆರೆದ ನವೀನ: ಆರು‌ ಜನರಿಗೆ ಅಂಗಾಂಗ ದಾನ

- Advertisement -
- Advertisement -

ಮಣಿಪಾಲ: ಅಪಘಾತಕ್ಕೀಡಾಗಿದ್ದ ವ್ಯಕ್ತಿಯ ಅಂಗಾಂಗ ದಾನ ಮಾಡಿ ಆರು ಜನರಿಗೆ ಜೀವದಾನ ನೀಡಿದ ಘಟನೆ ಮಣಿಪಾಲದಲ್ಲಿ ನಡೆದಿದೆ. 38 ವರ್ಷದ ನವೀನ್‌ ಎಂಬಾತ ಬ್ರಹ್ಮಾವರದ ಕೊಕ್ಕರ್ಣೆ ರಸ್ತೆಯಲ್ಲಿ ಅಪಘಾತಕ್ಕೀಡಾಗಿದ್ದ. ಈತನನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ದಾಖಲಿಸಲಾಗಿತ್ತು. ಆದ್ರೆ ಗಂಭೀರ ಗಾಯಗೊಂಡಿದ್ದ ನವೀನ್‌ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಇತ್ತು. ಬಹುತೇಕ ಅಂಗಾಂಗಳು ನಿಷ್ಕ್ರಿಯಗೊಂಡಿದ್ದವು.

ನಂತರ ನವೀನ್ ಕುಟುಂಬಸ್ಥರು ಅಂಗಾಂಗ ದಾನ ಮಾಡುವ ಇಚ್ಚೆ ವ್ಯಕ್ತಪಡಿಸಿದ್ರು. ಅದರಂತೆ ಎರಡು ಮೂತ್ರಪಿಂಡಗಳು, ಯಕೃತ್ತು, ಚರ್ಮ  ಮತ್ತು ಎರಡು ಕಾರ್ನಿಯಾಗಳು/ಕಣ್ಣುಗುಡ್ಡೆಗಳನ್ನು ತೆಗೆದು 6 ಜನರ ಜೀವ ಉಳಿಸಲು ಸಹಾಯವಾಗಿದೆ. ನವೀನ್ ಅವರ ಯಕೃತ್ತು ಮತ್ತು ಒಂದು ಕಿಡ್ನಿಯನ್ನು  ಕೆ ಎಂ ಸಿ ಆಸ್ಪತ್ರೆಯಿಂದ ಇವತ್ತು ಝೀರೋ ಟ್ರಾಫಿಕ್ ಮೂಲಕ ಮಂಗಳೂರಿಗೆ  ಕಳುಹಿಸಿಕೊಡಲಾಯಿತು.

- Advertisement -

Latest News

error: Content is protected !!