Friday, June 5, 2026
Homeಕರಾವಳಿಉಡುಪಿಜಿಲ್ಲೆಯಾದ್ಯಂತ ಜುಲೈ 16 ಕ್ಕೆ ಆರೆಂಜ್ ಅಲರ್ಟ್ ಘೋಷಣೆ; ಜುಲೈ 17 ಮತ್ತು 18ಕ್ಕೂ ಆರೆಂಜ್ ಎಚ್ಚರಿಕೆ

ಜಿಲ್ಲೆಯಾದ್ಯಂತ ಜುಲೈ 16 ಕ್ಕೆ ಆರೆಂಜ್ ಅಲರ್ಟ್ ಘೋಷಣೆ; ಜುಲೈ 17 ಮತ್ತು 18ಕ್ಕೂ ಆರೆಂಜ್ ಎಚ್ಚರಿಕೆ

- Advertisement -
- Advertisement -

ಮಂಗಳೂರು: ಕರಾವಳಿ ಪ್ರದೇಶದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಭಾರೀ ಮಳೆಯಾಗಿದೆ.

ಕಡಬ, ಬೆಳ್ತಂಗಡಿ, ಧರ್ಮಸ್ಥಳ, ಉಜಿರೆ, ಮಡಂತ್ಯಾರು, ಉಪ್ಪಿನಂಗಡಿ, ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ಪಂಜ, ಕೊಲ್ಲಮೊಗ್ರು, ಸುರತ್ಕಲ್, ಮೂಡುಬಿದಿರೆ, ಬಜ್ಪೆ, ಕಟೀಲು, ವಿಟ್ಲ, ಬಂಟ್ವಾಳ, ಕನ್ಯಾನ, ಪೆರುವಾಯಿ ಸೇರಿದಂತೆ ಇತರೆಡೆ ಭಾರಿ ಮಳೆಯಾಗಿದೆ.

ಇನ್ನು ಜಿಲ್ಲೆಯಾದ್ಯಂತ ಭಾರತ ಹವಾಮಾನ ಇಲಾಖೆಯು (ಐಎಂಡಿ) ಜುಲೈ 16 ಕ್ಕೆ ಆರೆಂಜ್ ಅಲರ್ಟ್ ಘೋಷಿಸಿದೆ. ಹಾಗೆಯೇ ಭಾರೀ ಮಳೆಯ ಕಾರಣದಿಂದಾಗಿ ಜುಲೈ 17 ಮತ್ತು 18 ಕ್ಕೂ ಆರೆಂಜ್ ಎಚ್ಚರಿಕೆಗಳನ್ನು ಘೋಷಿಸಲಾಗಿದೆ.

- Advertisement -

Latest News

error: Content is protected !!