Saturday, May 4, 2024
Homeತಾಜಾ ಸುದ್ದಿಒಬ್ಬನೇ ಪ್ರಯಾಣಿಕನಿಗಾಗಿ ಮುಂಬೈನಿಂದ ದುಬೈಗೆ ಹಾರಿದ ವಿಮಾನ

ಒಬ್ಬನೇ ಪ್ರಯಾಣಿಕನಿಗಾಗಿ ಮುಂಬೈನಿಂದ ದುಬೈಗೆ ಹಾರಿದ ವಿಮಾನ

spot_img
- Advertisement -
- Advertisement -

ಮುಂಬೈ: ಕೊರೊನಾ ಕಾರಣದಿಂದಾಗಿ ಹದಿನೆಂಟು ಸಾವಿರ ರೂ. ಟಿಕೆಟ್‌ ನೀಡಿ, ಮುಂಬೈನಿಂದ ದುಬೈಗೆ ವಿಮಾನದಲ್ಲಿ ಒಬ್ಬರೇ ಒಬ್ಬ ವ್ಯಕ್ತಿ ಪ್ರಯಾಣಿಸಿದ್ದಾರೆ. ಮೇ 19ರಂದು 360 ಪ್ರಯಾಣಿಕರ ಸಾಮರ್ಥ್ಯ ಇರುವ ಬೋಯಿಂಗ್‌ 777 ವಿಮಾನದಲ್ಲಿ ಸ್ಟಾರ್‌ಗೆಮ್ಸ್ ನ  ಸಿಇಒ  ಭವೇಶ್‌ ಜವೇರಿ ಪ್ರಯಾಣಿಸಿದ್ದಾರೆ.

ಒಟ್ಟು ಎರಡೂವರೆ ಗಂಟೆ ಪ್ರಯಾಣದ ಅವಧಿಯಲ್ಲಿ ವಿಮಾನದಲ್ಲಿ ಪ್ರಯಾಣಿಕರ ಸಾಲಿನಲ್ಲಿ ಇದ್ದದ್ದು ಅವರೊಬ್ಬರೇ. “ನಾನು ವಿಮಾನದೊಳಕ್ಕೆ ಪ್ರವೇಶಿಸುತ್ತಿದ್ದಂತೆಯೇ ಗಗನಸಖೀ ಆತ್ಮೀಯವಾಗಿ ಸ್ವಾಗತಿಸಿ ಚಪ್ಪಾಳೆ ತಟ್ಟಿದರು, ಜತೆಗೆ ಕಾಕ್‌ಪಿಟ್‌ನಿಂದ ಪೈಲಟ್‌ ಕೂಡ ಕೈ ಬೀಸಿ ಆತ್ಮೀಯತೆ ತೋರಿದರು’ ಎಂದು ಹೇಳಿದ್ದಾರೆ.

ಇಪ್ಪತ್ತು ವರ್ಷಗಳ ಅವಧಿಯಲ್ಲಿ ಮುಂಬಯಿ ಮತ್ತು ದುಬೈ ನಡುವೆ 240 ಬಾರಿ ವಿಮಾನಗಳಲ್ಲಿ ಪ್ರಯಾಣಿಸಿರುವ ಬಗ್ಗೆ ಜವೇರಿ ತಿಳಿಸಿದ್ದಾರೆ. ಇದೊಂದು ಅತ್ಯುತ್ತಮ ವಿಮಾನ ಪ್ರಯಾಣ. ನಮ್ಮ ಬಳಿ ಹಣ ಇದ್ದರೆ ಎಲ್ಲವನ್ನೂ ಖರೀದಿಸಲು ಸಾಧ್ಯವಿಲ್ಲ. ಅದೇ ರೀತಿ ಎಷ್ಟು ಮೊತ್ತ ವೆಚ್ಚ ಮಾಡಿದರೂ, ಇಂಥ ಅಪೂರ್ವ ಅನುಭವ ಸಿಗುವುದಿಲ್ಲ ಎಂದು ಹೇಳಿದ್ದಾರೆ. ವಿಮಾನದ ಕಮಾಂಡರ್‌ ಬಂದು “ಪೂರ್ಣ ವಿಮಾನದ ಪರಿಚಯ ಮಾಡ ಬೇಕೇ ಎಂದು ತಮಾಷೆ ಮಾಡಿದರು ಎಂದಿದ್ದಾರೆ.

ಏಕೈಕ ಪ್ರಯಾಣಿಕನಿಗಾಗಿ ವಿಮಾನ ಹಾರಿಸಬೇಕಿತ್ತೇ ಎಂಬ ಜಿಜ್ಞಾಸೆಗೂ ಉತ್ತರ ಸಿಕ್ಕಿದೆ. ಇದಕ್ಕೊಂದು ಕಾರಣವಿದೆ. ಜವೇರಿ, ಯುಎಇ ಸರಕಾರದ ಗೋಲ್ಡನ್‌ ವೀಸಾ ಪಡೆದುಕೊಂಡಿದ್ದಾರೆ. ರಾಜ ತಾಂತ್ರಿಕ ಅಧಿಕಾರಿಗಳು, ಯುಎಇ ಪ್ರಜೆಗಳು ಮಾತ್ರ ಇಂಥ ಸೌಲಭ್ಯ ಇದೆ. ಲೆಕ್ಕಾಚಾರ ಹಾಕುವುದಿದ್ದರೆ ಎರಡೂವರೆ ಗಂಟೆ ಪ್ರಯಾಣಕ್ಕೆ 17 ಟನ್‌ ವೈಮಾನಿಕ ಇಂಧನ ಬೇಕು. ಮಾರುಕಟ್ಟೆಯಲ್ಲಿ ಅದರ ಬೆಲೆ 8 ಲಕ್ಷ ರೂ. ಆದರೆ 18 ಸಾವಿರ ರೂಪಾಯಿ ಟಿಕೆಟ್ ನೀಡಿ ಅವರು ಒಬ್ಬರೇ  ಪ್ರಯಾಣಿಸಿದ್ದಾರೆ.

- Advertisement -
spot_img

Latest News

error: Content is protected !!