Tuesday, May 14, 2024
Homeಕರಾವಳಿಫೇಸ್ ಬುಕ್ ನಲ್ಲಿ ಬಂದ ಉದ್ಯೋಗದ ಜಾಹೀರಾತು ನೋಡಿ 9 ಲಕ್ಷ ಕಳೆದುಕೊಂಡ ಬಂಟ್ವಾಳದ ಯುವಕ

ಫೇಸ್ ಬುಕ್ ನಲ್ಲಿ ಬಂದ ಉದ್ಯೋಗದ ಜಾಹೀರಾತು ನೋಡಿ 9 ಲಕ್ಷ ಕಳೆದುಕೊಂಡ ಬಂಟ್ವಾಳದ ಯುವಕ

spot_img
- Advertisement -
- Advertisement -

ಬಂಟ್ವಾಳ; ಫೇಸ್ ಬುಕ್ ನಲ್ಲಿ ಬಂದ ಉದ್ಯೋಗದ ಜಾಹೀರಾತು ನಂಬಿ ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಯುವಕನೊಬ್ಬ 9ಲಕ್ಷದ 79 ಸಾವಿರ ರೂಪಾಯಿ ಕಳೆದುಕೊಂಡಿದ್ದಾನೆ. ಸದ್ಯ ಯುವಕ ಕಂಪನಿಯ ಉದ್ಯೋಗದಲ್ಲಿದ್ದು ವರ್ಕ್ ಫ್ರಮ್ ಹೋಮ್ ನಲ್ಲಿದ್ದಾರ. ಇದರೊಂದಿಗೆ ಇನ್ನೊಂದು ಫ್ರೀಲ್ಯಾನ್ಸಿಂಗ್  ಉದ್ಯೋಗ ಪಡೆಯುವ ಆಸೆಯಿಂದ  ಫೇಸ್​​ಬುಕ್ ನಲ್ಲಿ  ಕಂಡ ​ ಜಾಹೀರಾತು ನಂಬಿ ವಾಟ್ಸಾಪ್  ಮೂಲಕ ಅವರನ್ನು ಸಂಪರ್ಕಿಸಿದ್ದಾನೆ.

ಅದರಂತೆ ಅವರು ಕೆಲಸದ ಫಾರ್ಮ್​​ನ್ನು ತುಂಬುವಂತೆ ಯುವಕನಿಗೆ ಕಳುಹಿಸಿದ್ದಾರೆ. ಯುವಕನಿಂದ ವಿವಿಧ ಬ್ಯಾಂಕ್​ ಅಕೌಂಟ್​​ಗಳಿಗೆ ವೀಸಾ ಕೆಲಸಕ್ಕಾಗಿ ಹಣ ಹಾಕಿಸಿಕೊಂಡಿದ್ದಾರೆ. ಕಸ್ಟಮ್ಸ್ ಕ್ಲಿಯರೆನ್ಸ್ ಮತ್ತು ಇತರ ಬದಲಾವಣೆಗಾಗಿ ಎಟಿಎಂ ಮೂಲಕ, ಫೋನ್​ ಪೇ ಮೂಲಕ ಹಣ ಹಾಕಿಸಿಕೊಂಡಿದ್ದು ಬರೊಬ್ಬರಿ 9.79 ಲಕ್ಷ ರೂ. ಪಡೆದು ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಈ ವಂಚನೆ ಬಗ್ಗೆ ಸಿಇಎನ್​ ಪೊಲೀಸ್​ ಠಾಣೆಯಲ್ಲಿ ​ಐಟಿ ಕಾಯ್ದೆಯ ಸೆಕ್ಷನ್ 66 (ಡಿ) ಮತ್ತು ಐಪಿಸಿಯ ಸೆಕ್ಷನ್ 419 ಮತ್ತು 420 ರ ಅಡಿಯಲ್ಲಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

- Advertisement -
spot_img

Latest News

error: Content is protected !!