Monday, April 29, 2024
Homeಕರಾವಳಿಉಡುಪಿಪೊಲೀಸ್ ಅಧೀಕ್ಷಕ ಎಸ್ ಪಿ ಸಿಂಗ್ ಹೆಸರಲ್ಲಿ ಆನ್ ಲೈನ್ ವಂಚನೆಗೆ ಯತ್ನ

ಪೊಲೀಸ್ ಅಧೀಕ್ಷಕ ಎಸ್ ಪಿ ಸಿಂಗ್ ಹೆಸರಲ್ಲಿ ಆನ್ ಲೈನ್ ವಂಚನೆಗೆ ಯತ್ನ

spot_img
- Advertisement -
- Advertisement -

ಉಡುಪಿ: ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಎಸ್ ಪಿ ಸಿಂಗ್ ಹೆಸರಲ್ಲಿ ನಕಲಿ ಫೇಸ್ ಬುಕ್ ಐಡಿ ತೆರೆಯಲಾಗಿದೆ. ರಾಜ್ಯಾದ್ಯಂತ ಪೊಲೀಸರ ಹೆಸರಲ್ಲೇ ನಕಲಿ ಖಾತೆ ಸೃಷ್ಟಿಸಿ ವಂಚಿಸುವ ಪ್ರಕರಣಗಳು ಹೆಚ್ಚುತ್ತಿದ್ದು ಇದು ಸೇರ್ಪಡೆ ಯಾಗಿದೆ. ಆದರೆ ಪೋಲೀಸರು ಈ ಖಾತೆಯನ್ನು ಅರ್ಧ ತಾಸಿನಲ್ಲಿ ಪತ್ತೆಹಚ್ಚಿದ್ದಾರೆ.

ಅಪರಾಧಿಗಳು ಉಡುಪಿಯ ಕರಾವಳಿ ಕಾವಲು ಪೊಲೀಸ್ ಚೇತನ್ ಕುಮಾರ್ ಅವರ ಚಿತ್ರವನ್ನು ಖಾತೆಯಲ್ಲಿ ಬಳಸಿದ್ದರು. ಆದರೆ ಹೆಸರು ಮತ್ತು ಮಾಹಿತಿಯಲ್ಲಿ ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಎಸ್ ಪಿ ಸಿಂಗ್ ಅವರ ಮಾಹಿತಿಯನ್ನು ಉಪಯೋಗಿಸಿ ಕೊಂಡಿದ್ದರು. ಪ್ರಕರಣದ ಕುರಿತು ಸಯ್ಬರ್ ಪೊಲೀಸರಿಗೆ ಕರಾವಳಿ ಕಾವಲು ಪೊಲೀಸ್ ಚೇತನ್ ಕುಮಾರ್ ದೂರುನೀಡಿದ್ದಾರೆ.

- Advertisement -
spot_img

Latest News

error: Content is protected !!