Thursday, May 9, 2024
Homeತಾಜಾ ಸುದ್ದಿನಿಮ್ಮ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿದೆ, ಶೀಘ್ರದಲ್ಲೇ ಪ್ಲೇ ಸ್ಟೋರ್‌ಗೆ ಬರ್ತೇವೆ, ಬಳಕೆದಾರರಿಗೆ ಅಭಯ ನೀಡಿದ Paytm

ನಿಮ್ಮ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿದೆ, ಶೀಘ್ರದಲ್ಲೇ ಪ್ಲೇ ಸ್ಟೋರ್‌ಗೆ ಬರ್ತೇವೆ, ಬಳಕೆದಾರರಿಗೆ ಅಭಯ ನೀಡಿದ Paytm

spot_img
- Advertisement -
- Advertisement -

ನವದೆಹಲಿ : ಆನ್‌ಲೈನ್ ಜೂಜಾಟ ನೀತಿಗಳನ್ನ ಉಲ್ಲಂಘಿಸಲಾಗಿದೆ ಎನ್ನುವ ಆರೋಪದ ಮೇಲೆ ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಪೇಟಿಎಂ ಅಪ್ಲಿಕೇಶನ್ ತೆಗದುಹಾಕಿದ್ದು, ಈ ಹಿನ್ನೆಲೆಯಲ್ಲಿ ಪೇಟಿಎಂ ಟ್ವೀಟ್ ಮಾಡಿ ಸ್ಟಷ್ಟನೆ ನೀಡಿದೆ.

ಫಿನ್ಟೆಕ್ ಪ್ರಮುಖ ಪೇಟಿಎಂ ಇಂದು ತನ್ನ ಬಳಕೆದಾರರಿಗೆ ‘ಭಯಪಡಬೇಡಿ ಮತ್ತು ನಿಮ್ಮ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿದೆ’ ಎಂದು ಹೇಳಿದೆ.

ಟ್ವೀಟ್‌ ಮಾಡಿರುವ ಪೇಟಿಎಂ, ‘ಆತ್ಮೀಯ ಪೇಟಿಎಂ ಗ್ರಾಹಕರೇ , ಹೊಸ ಡೌನ್‌ಲೋಡ್‌ಗಳು ಅಥವಾ ನವೀಕರಣಗಳಿಗಾಗಿ Paytm Android ಅಪ್ಲಿಕೇಶನ್ Google ನ ಪ್ಲೇ ಸ್ಟೋರ್‌ನಲ್ಲಿ ತಾತ್ಕಾಲಿಕವಾಗಿ ಲಭ್ಯವಿಲ್ಲ. ಅದು ಶೀಘ್ರದಲ್ಲೇ ಹಿಂತಿರುಗಲಿದೆ. ನಿಮ್ಮ ಎಲ್ಲಾ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿದೆ, ಮತ್ತು ನಿಮ್ಮ Paytm ಅಪ್ಲಿಕೇಶನ್ ಅನ್ನು ನೀವು ಸಾಮಾನ್ಯ ರೀತಿಯಲ್ಲಿ ಆನಂದಿಸುವುದನ್ನು ಮುಂದುವರಿಸಬಹುದು’ ಎಂದಿದೆ.

- Advertisement -
spot_img

Latest News

error: Content is protected !!