Saturday, November 2, 2024
Homeಇತರಇಬ್ಬರು ಹೆಂಡಿರ ಮುದ್ದಿನ ಗಂಡ ಲಾಕ್ ಡೌನ್ ನಲ್ಲಿ ಸಿಕ್ಕಿಹಾಕ್ಕೊಂಡ

ಇಬ್ಬರು ಹೆಂಡಿರ ಮುದ್ದಿನ ಗಂಡ ಲಾಕ್ ಡೌನ್ ನಲ್ಲಿ ಸಿಕ್ಕಿಹಾಕ್ಕೊಂಡ

spot_img
- Advertisement -
- Advertisement -

ಬೆಂಗಳೂರು: ಇಬ್ಬರು ಹೆಂಡಿರ‌ ಮುದ್ದಿನ ಗಂಡ ಲಾಕ್ ಡೌನ್ ನಲ್ಲಿ ಸಂಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡ ಕಥೆಯಿದು. ಬೆಂಗಳೂರು ಪೊಲೀಸ್ ಮಹಿಳಾ ಸಹಾಯವಾಣಿ ಕುಟುಂಬ ಕಲಹವನ್ನು ತ್ರಿಪಕ್ಷೀಯ ಒಪ್ಪಂದ ಮಾಡಿಸಿ ಬಗೆಹರಿಸಿದೆ.

ಘಟನೆಯ ವಿವರ

ಪಶ್ಚಿಮ ಬೆಂಗಳೂರಿನ 40 ವರ್ಷದ ಗಾರ್ಮೆಂಟ್ ಉದ್ಯಮಿ ನವೀನ್ (ಹೆಸರು ಬದಲಿಸಲಾಗಿದೆ). ಕೆಲ ವರ್ಷಗಳ ಹಿಂದೆ 38 ವರ್ಷದ ಮಾಧುರಿ (ಹೆಸರು ಬದಲಿಸಲಾಗಿದೆ)ಎಂಬಾಕೆಯನ್ನು ಮದುವೆಯಾಗಿದ್ದ. ದಂಪತಿಗೆ ಒಂದು ಮಗು ಹುಟ್ಟಿತ್ತು.‌ ಗಂಡನಿಗೆ ರಕ್ಷಿತಾ (ಹೆಸರು ಬದಲಿಸಲಾಗಿದೆ) ಎಂಬ ಇನ್ನೊಬ್ಬಾಕೆಯ ಜತೆ ಸಂಬಂಧ ಇರುವುದು ಮಾಧುರಿಗೆ ಮದುವೆಯಾಗಿ ಒಂದುವರೆ ವರ್ಷದ ನಂತರ ತಿಳಿದಿತ್ತು. ಆತ ಎರಡೂ ಸಂಬಂಧವನ್ನು ಮೆಂಟೇನ್ ಮಾಡಿಕೊಂಡು ಬಂದಿದ್ದ ಎಂಬುದು ಅರ್ಥವಾದ ನಂತರ ಬೆಂಗಳೂರು ಪೊಲೀಸ್ ಮಹಿಳಾ ಸಹಾಯವಾಣಿಗೆ ಕರೆ ಮಾಡಿದ ಮಾಧುರಿ ಸಹಾಯ ಕೋರಿದ್ದಳು.

ವಿವಾದವಾಗುವುದನ್ನು ತಪ್ಪಿಸಲು ನವೀನ್ ಕಾನೂನು ಕ್ರಮ ವಹಿಸದಂತೆ ಮಾಧುರಿ ಬಳಿ ಕೇಳಿಕೊಂಡಿದ್ದ. ಹಿರಿಯರ ಮಾತುಕತೆಯ ನಂತರ ಮೂವರ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು. ನವೀನ್ ಇಬ್ಬರೂ ಹೆಂಡಿರ ಮನೆಯಲ್ಲಿ ಒಂದೊಂದು ವಾರ ಇರುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದಂತೆ ನವೀನ್ ಇಬ್ಬರು ಹೆಂಡಿರ ಮನೆಯ ವಾಸ ಮುಂದುವರಿಸಿದ್ದ.

ಆದರೆ, ಲಾಕ್ ಡೌನ್ ನವೀನನ ಈ ಎರಡು ದೋಣಿಗಳ ಮೇಲಿನ ಪ್ರಯಾಣಕ್ಕೆ ಸಂಕಷ್ಟ ತಂದಿಟ್ಟಿದೆ. ಮಾ.21ರಂದು ನವೀನ್ ರಕ್ಷಿತಾ ಮನೆಯಲ್ಲಿದ್ದ. 28ರಂದು ಮಾಧುರಿ ಮನೆಗೆ ಬರಬೇಕಿತ್ತು. ಆದರೆ, ಬರಲಾಗಲಿಲ್ಲ. ತಮ್ಮ‌ ಮನೆಯಲ್ಲಿ ದಿನಸಿ ಸಾಮಗ್ರಿಗಳು ಖಾಲಿಯಾಗಿವೆ ತರುವಂತೆ ಸಾಕಷ್ಟು ಬಾರಿ ಮಾಧುರಿ ಕರೆ‌ ಮಾಡಿದ್ದಳು. ಆದರೆ, ನವೀನ್ ಬಾರದ ಕಾರಣ ಆಕೆ ಮತ್ತೊಮ್ಮೆ ಮಹಿಳಾ‌ ಸಹಾಯವಾಣಿಗೆ ದೂರು ನೀಡಿದ್ದಳು. ಇದರಿಂದ ಟೆನ್ಶನ್ ಗೆ ಒಳಗಾದ ನವೀನ್ ತನ್ನ ಸ್ನೇಹಿತನ ಮನೆ ಸೇರಿದ್ದಾನೆ.

ಪೊಲೀಸರು, ಸಹಾಯವಾಣಿಯ ಆಪ್ತ ಸಮಾಲೋಚಕರು ನವೀನ ಜತೆ ಚರ್ಚಿಸಿದ್ದು, ತ್ರಿಪಕ್ಷೀಯ ಒಪ್ಪಂದ‌ ಮಾಡಿಸಿದ್ದಾರೆ. ಮಾಧುರಿ ಮನೆಗೆ ಬೇಕಾದ ದಿನಸಿ ಸಾಮಗ್ರಿ ಶೀಘ್ರ ವ್ಯವಸ್ಥೆ‌ ಮಾಡುತ್ತೇನೆ. ಹೆಂಡಿರ ಸಿಟ್ಟು ಕಡಿಮೆಯಾದ ನಂತರ ಇಬ್ಬರ ಮನೆಗೂ ತೆರಳುತ್ತೇನೆ ಎಂದು ನವೀನ್ ತಿಳಿಸಿದ್ದಾನೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!