Monday, June 8, 2026
Homeತಾಜಾ ಸುದ್ದಿವೃದ್ಧ ದಂಪತಿಗೆ ವಂಚನೆ- ಖದೀಮನ ಹೆಡೆಮುರಿಕಟ್ಟಿದ ಪೊಲೀಸರು!..

ವೃದ್ಧ ದಂಪತಿಗೆ ವಂಚನೆ- ಖದೀಮನ ಹೆಡೆಮುರಿಕಟ್ಟಿದ ಪೊಲೀಸರು!..

- Advertisement -
- Advertisement -

ಬೆಂಗಳೂರು :ಇಲ್ಲಿನ ರಾಜಾಜಿನಗರದಲ್ಲಿ ಗೃಹ ಪ್ರವೇಶಕ್ಕೆ ಬೆಳ್ಳಿ ನಾಣ್ಯ ಕೊಡುವ ನೆಪದಲ್ಲಿ ದಂಪತಿಗೆ ವಂಚನೆ ಮಾಡಿರುವ ಪ್ರಕರಣ ದಾಖಲಾಗಿದೆ. ಸೀತಾಪತಿ ಎಂಬವರ ಮನೆಗೆ ವ್ಯಕ್ತಿಯೊಬ್ಬ ಎದುರು ಮನೆಯ ನಿವಾಸಿ ಎಂದು ನಂಬಿಸಿ ಮನೆ ಗೃಹ ಪ್ರವೇಶಕ್ಕೆ ಆಮಂತ್ರಣ ನೀಡಿ, ಬೆಳ್ಳಿ ನಾಣ್ಯ ಕೊಟ್ಟಿದ್ದ.
ಕಾರ್ಯಕ್ರಮಕ್ಕೆ ಬಂದರೆ ಚಿನ್ನದ ಡಾಲರ್ ಕೊಡುತ್ತೇವೆ ಎಂದು ಹೇಳಿ ಸೀತಾಪತಿಯ ಹೆಂಡತಿಯ ಬಳಿ ಇರುವ 22ಗ್ರಾಂ ಚಿನ್ನಾಭರಣ ಪಡೆದಿದ್ದ. .
ಮನೆಗೆ ಗ್ಯಾಸ್ ಸಿಲಿಂಡರ್ ವಿತರಣೆಗೆ ಬಂದಾಗ ಅಷ್ಟರಲ್ಲಾಗಲೇ ವೃದ್ಧ ಸೀತಾಪತಿಯ ಪತ್ನಿಯ ಚಿನ್ನದ ಸರ ಕದ್ದು ಅಕ್ಷಯ್ ಎಸ್ಕೇಪ್ ಆಗಿದ್ದ. ಬಳಿಕ ಸುಬ್ರಹ್ಮಣ್ಯ ನಗರ ಪೊಲೀಸರಿಂದ ಆರೋಪಿ ಅಕ್ಷಯ್​ಗಾಗಿ ಶೋಧ ನಡೆಸಲಾಗಿದೆ.
ಬೆಂಗಳೂರಿನ ರಾಜಾಜಿನಗರದಲ್ಲಿ ಘಟನೆ ನಡೆದಿದೆ.ಸಿಸಿಟಿವಿ ದೃಶ್ಯಾವಳಿ ಆಧರಿಸಿ, ಆರೋಪಿ ಅಕ್ಷಯ್ ಡಿಯೋ ಬೈಕ್ ಪತ್ತೆ ಹಚ್ಚಲಾಗಿದೆ. ಡಿಯೋ ಬೈಕ್ ನಂಬರ್ KA-02 HV-4778 ನಂಬರ್ ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಅಕ್ಷಯ್​ನಿಂದ 22 ಗ್ರಾಂ ಚಿನ್ನದ ಸರ ಹಾಗೂ ಬೈಕ್ ಜಪ್ತಿ ಮಾಡಲಾಗಿದ್ದು, ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!