- Advertisement -
![]()
- Advertisement -
ಮಂಗಳೂರು: ಜಿಲ್ಲೆಯಾದ್ಯಂತ ಕೋವಿಡ್-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಮಹತ್ವದ ಸೂಚನೆ ನೀಡಿದ್ದಾರೆ. “ಕೋವಿಡ್-19 ವೈರಾಣು ಸೋಂಕು ವ್ಯಾಪಕವಾಗುತ್ತಿರುವುದರಿಂದ ಅ. 17ರಿಂದ 26ರ ವರೆಗೆ ಜಿಲ್ಲೆಯಾದ್ಯಂತ ದಸರಾವನ್ನು ಸಾರ್ವಜನಿಕರು ಅತ್ಯಂತ ಸರಳವಾಗಿ, 100ಕ್ಕಿಂತ ಹೆಚ್ಚು ಜನರು ಒಂದೆಡೆ ಸೇರದಂತೆ ಆಚರಿಸಬೇಕು” ಎಂದು ಅವರು ತಿಳಿಸಿದ್ದಾರೆ.
ಕೋವಿಡ್-19 ಮಾರ್ಗಸೂಚಿಗಳು ಉಲ್ಲಂಘನೆ ಯಾದಲ್ಲಿ ಕಾರ್ಯಕ್ರಮದ ಆಯೋಜಕರು, ದೇವಸ್ಥಾನದ ಆಡಳಿತಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದಿದ್ದಾರೆ. ಸಾಮಾಜಿಕ ಅಂತರವಿಲ್ಲದೆ ನಡೆಸಲಾಗುವ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಹುಲಿ ವೇಷಗಳಿಗೆ ಸೀಮಿತ ಅನುಮತಿ ಸೇರಿದಂತೆ ,ಮಾರ್ಗಸೂಚಿಗಳು ನವರಾತ್ರಿ ಹಾಗೂ ದುರ್ಗಾ ಪೂಜೆಯ ಆಚರಣೆಗೂ ಅನ್ವಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
- Advertisement -


