- Advertisement -
- Advertisement -
ಬೆಂಗಳೂರು ಒಬ್ಬ ವ್ಯಕ್ತಿಯನ್ನು ಹೊರಗಿನಿಂದ ನೋಡಿ ಅನ್ನೋ ಮಾತಿದೆ. ನಿಜಕ್ಕೂ ಈ ವಿಡಿಯೋ ನೋಡಿದ್ರೆ ನಿಮಗೆ ಆ ಮಾತು ನಿಜ ಅಂತಾ ಅನ್ನಿಸದೇ ಇರಲ್ಲ. ಬೆಂಗಳೂರಿನ ಸದಾಶಿವನಗರದಲ್ಲಿ ಭಿಕ್ಷುಕಿ ಅಜ್ಜಿಯೊಬ್ಬರು ಎಲ್ಲರೂ ಬೆರಗಾಗುವಂತೆ ಇಂಗ್ಲೀಷ್ ಮಾತನಾಡೋ ವಿಡಿಯೋ ಒಂದನ್ನು ಗಾಯಕಿ ಸಚಿನಾ ಹೆಗ್ಗರ್ ಅವರು ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ.
ಈ ವಿಡಿಯೋದಲ್ಲಿರುವ ಅಜ್ಜಿ ನಾನು ಜಪಾನ್ ನಲ್ಲಿ 7 ವರ್ಷಗಳ ಕಾಲ ಕೆಲಸ ಮಾಡಿದ್ದೆ. ನನ್ನ ತಾಯಿ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದರು ಎಂದೆಲ್ಲಾ ಹೇಳಿದ್ದಾರೆ. ಅಂದ್ಹಾಗೆ ಈ ಅಜ್ಜಿ ಯಾರು ಏನು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
- Advertisement -