Thursday, June 4, 2026
Homeತಾಜಾ ಸುದ್ದಿಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್ ದನಿಯಲ್ಲಿ ಅಲೆಕ್ಸಾ!

ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್ ದನಿಯಲ್ಲಿ ಅಲೆಕ್ಸಾ!

- Advertisement -
- Advertisement -

ನವದೆಹಲಿ: ವಾಯ್ಸ್ ಅಸಿಸ್ಟೆಂಟ್ ಎಂದೇ ಹೆಸರಾಗಿರುವ ದನಿಯಾಧಾರಿತ ವಿದ್ಯುನ್ಮಾನ ಉಪಕರಣ ಅಮೇಜಾನ್ ಸಂಸ್ಥೆಯ ‘ಅಲೆಕ್ಸಾ’ ಇನ್ನು ಮುಂದೆ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ದನಿಯಲ್ಲಿ ಮಾತನಾಡಲಿದೆ.

ಅಮಿತಾಭ್‌ ಬಚ್ಚನ್‌ ಕೇವಲ ತಮ್ಮ ನಟನೆಯಿಂದಷ್ಟೇ ಅಲ್ಲದೇ, ತಮ್ಮ ಅದ್ಭುತ ಧ್ವನಿಯಿಂದಲೂ ಗುರುತಿಸಿ ಕೊಂಡವರು. ಅಮಿತಾಭ್‌ರ ಧ್ವನಿ ಕೇಳಬೇಕೆಂದರೆ ಬಳಕೆದಾರರು, “ಅಲೆಕ್ಸಾ, ಸೇ ಹಲೋ ಟು ಮಿಸ್ಟರ್‌ ಅಮಿತಾಭ್‌ ಬಚ್ಚನ್‌’ ಎಂದು ಹೇಳಿದರೆ ಸಾಕು, ಆಗ ಹೆಣ್ಣು ಧ್ವನಿಯ ಬದಲಾಗಿ ಅಮಿತಾಭ್‌ ಮಾತು ಕೇಳಿಸುತ್ತದೆ.

ಅಮೇಜಾನ್ ಸಂಸ್ಥೆ ಇದೇ ಮೊದಲ ಬಾರಿಗೆ ಅಮೆರಿಕದಿಂದಾಚೆಗೆ ಮೊದಲ ಸೆಲಬ್ರಿಟಿ ದನಿಯನ್ನು ತನ್ನ ಅಲೆಕ್ಸಾ ಉಪಕರಣಕ್ಕೆ ಅಳವಡಿಸಿದೆ. ಈ ಹಿಂದೆ ಹಾಲಿವುಡ್ ನ ಖ್ಯಾತ ಹಿರಿಯ ನಟ ಸ್ಯಾಮುಯೆಲ್ ಜಾಕ್ಸನ್ ಸೇರಿದಂತೆ ಮೂವರು ಖ್ಯಾತನಾಮರ ದನಿಯನ್ನು ಅಲೆಕ್ಸಾಗೆ ಅಳವಡಿಸಿತ್ತು. ಇದೇ ಮೊದಲ ಬಾರಿಗೆ ಹಾಲಿವುಡ್ ಹೊರತು ಪಡಿಸಿ ಅಮಿತಾಭ್ ಬಚ್ಚನ್ ಗೆ ಮಣೆ ಹಾಕಲಾಗಿದೆ. ಆ ಮೂಲಕ ಭಾರತದಲ್ಲಿ ಅಲೆಕ್ಸಾ ಉಪಕರಣದ ಮಾರಾಟ ಹೆಚ್ಚಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

ಬಳಕೆದಾರರು ಈ ಅದ್ಭುತ ಧ್ವನಿಯನ್ನು ಎಕೋ ಸಾಧನಗಳಲ್ಲಿ ಒಂದು ವರ್ಷಕ್ಕೆ 149 ರೂ. ಬೆಲೆಗೆ ಪಡೆದುಕೊಳ್ಳಬಹುದು ಎಂದು ಅಮೆಜಾನ್ ಹೇಳಿದೆ. ಅಲೆಕ್ಸಾದಲ್ಲಿ ಅಮಿತಾಭ್ ಅವರ ಜೀವನದ ಕಥೆ, ಹಾಡುಗಳು, ಟಂಗ್ ಟ್ವಿಸ್ಟರ್ಸ್ ಅಲ್ಲದೆ ಅವರ ಮೋಟಿವೇಶನ್ ಮಾತುಗಳನ್ನು ಕೇಳಬಹುದಾಗಿದೆ. ಉಳಿದಂತೆ ಮ್ಯೂಸಿಕ್, ಅಲರಾಮ್, ಹವಾಮಾನ ವರದಿ ಮಾಮೂಲಾಗಿ ಇರಲಿದೆ.

ಟೆಕ್ನಾಲಜಿಯಿಂದ ನಾನು ಅನೇಕ ವಿಚಾರಗಳಲ್ಲಿ ಅಪ್ಡೇಟ್ ಆಗಿದ್ದೀನಿ. ಇಷ್ಟು ದಿನಗಳ ಕಾಲ ಸಿನಿಮಾ, ಟಿವಿ ಶೋ, ಪಾಡ್‌ಕಾಸ್ಟ್ ಆಯ್ತು ಈಗ ಇದರಲ್ಲೂ ಬರುವುದಕ್ಕೆ ಖುಷಿಯಾಗುತ್ತಿದೆ. ಧ್ವನಿಯಿಂದ ನಮ್ಮ ಅಭಿಮಾನಿಗಳನ್ನು ಎಂಗೇಜ್‌ ಆಗಿಟ್ಟಿಕೊಳ್ಳಲು ಇದು ಒಳ್ಳೆಯ ಉಪಾಯ’ ಎಂದಿದ್ದಾರೆ ಅಮಿತಾಬ್ .

- Advertisement -

Latest News

error: Content is protected !!