Thursday, June 25, 2026
HomeUncategorizedಸುಳ್ಯ; ಪತಿಯ ತಿಥಿಯ ದಿನವೇ ಪತ್ನಿ ಅಸ್ವಸ್ಥಗೊಂಡು ಸಾವು

ಸುಳ್ಯ; ಪತಿಯ ತಿಥಿಯ ದಿನವೇ ಪತ್ನಿ ಅಸ್ವಸ್ಥಗೊಂಡು ಸಾವು

- Advertisement -
- Advertisement -

ಸುಳ್ಯ; ಪತಿಯ ತಿಥಿಯ ದಿನವೇ ಪತ್ನಿ ಅಸ್ವಸ್ಥಗೊಂಡು ಸಾವನ್ನಪ್ಪಿರುವ ಘಟನೆ ಕನಕಮಜಲಿನಲ್ಲಿ  ನಡೆದಿದೆ.

ಕನಕಮಜಲು ಗ್ರಾಮದ ನೆಡಿಲು ಸೋಮಪ್ಪ ಗೌಡ ಅವರು ಎ. 17ರಂದು ನಿಧನ ಹೊಂದಿದ್ದರು.  ನಿಧನ ಹೊಂದಿ  ಹನ್ನೊಂದನೇ ದಿನದ ಕಾರ್ಯಕ್ರಮ ನಿನ್ನೆ ಅಂದ್ರೆ ಏಪ್ರಿಲ್ 28 ರಂದು ನಡೆಯುತ್ತಿತ್ತು. ಕಾರ್ಯಕ್ರಮ ನಡೆಯುತ್ತಿರುವಾಗಲೇ ಮಧ್ಯಾಹ್ನದ ವೇಳೆಗೆ ಪತ್ನಿ ಸುಬ್ಬಕ್ಕ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ . ಕೂಡಲೇ ಸುಳ್ಯ ಆಸ್ಪತ್ರೆಗೆ ಕರೆತಂದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

- Advertisement -

Latest News

error: Content is protected !!