Wednesday, July 15, 2026
Homeಕರಾವಳಿನೀರು ಕಾಯಿಸಲು ಬೆಂಕಿ ಹಾಕುವಾಗ ಬೆಂಕಿ ತಾಗಿ ವೃದ್ಧೆ ಸಾವು

ನೀರು ಕಾಯಿಸಲು ಬೆಂಕಿ ಹಾಕುವಾಗ ಬೆಂಕಿ ತಾಗಿ ವೃದ್ಧೆ ಸಾವು

- Advertisement -
- Advertisement -

ಬೆಳ್ತಂಗಡಿ: ನೀರು ಕಾಯಿಸಲು ಬೆಂಕಿ ಹಾಕುವಾಗ  ಬೆಂಕಿ ತಾಗಿ ವೃದ್ಧೆ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ  ಮೈಕಾಡಿ ಎಂಬಲ್ಲಿ  ನಡೆದಿದೆ. 20.02.2022 ರಂದು ಸಂಜೆ 3 ಗಂಟೆ ವೇಳೆಗೆ ಗಿರಿಜಾ(74) ಎಂಬವರು ಎಂದಿನಂತೆ ಸ್ನಾನಕ್ಕೆ ನೀರು ಕಾಯಿಸಲು ಬೆಂಕಿ ಹಾಕುವಾಗ ಬೆಂಕಿ ಸೀರೆ ತಗುಲಿದೆ.

ತೀವ್ರ ಸುಟ್ಟಗಾಯಗೊಂಡ ಅವರನ್ನು ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಮೃತರು ಕುಟುಂಬಸ್ಥರು ಹಾಗೂ ಬಂಧು ಮಿತ್ರನ್ನು ಅಗಲಿದ್ದಾರೆ.

- Advertisement -

Latest News

error: Content is protected !!