Wednesday, June 24, 2026
Homeಕರಾವಳಿಉಡುಪಿಉಡುಪಿ; ಹುಲ್ಲು ತರಲು ತೆರಳಿದ್ದ ಮಹಿಳೆಯ ಮೃತದೇಹ ಅನುಮಾನಾಸ್ಪದವಾಗಿ ಪತ್ತೆ

ಉಡುಪಿ; ಹುಲ್ಲು ತರಲು ತೆರಳಿದ್ದ ಮಹಿಳೆಯ ಮೃತದೇಹ ಅನುಮಾನಾಸ್ಪದವಾಗಿ ಪತ್ತೆ

- Advertisement -
- Advertisement -

ಉಡುಪಿ; ಹುಲ್ಲು ತರಲು ತೆರಳಿದ್ದ ಮಹಿಳೆಯ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ಸರಳೇಬೆಟ್ಟು ವಾರ್ಡ್‌ನ ನೆಹರೂ ನಗರದ ನಿವಾಸಿ ಪುಷ್ಪಾ ನಾಯ್ಕ್ (66) ಅವರು ಜಾನುವಾರು ಗಳಿಗೆ ಮೇವು ತರಲೆಂದು ಮನೆಯ ಪಕ್ಕದ ಗುಡ್ಡಕ್ಕೆ ನ. 28ರಂದು ಸಂಜೆ 6 ಗಂಟೆಯ ಆಸುಪಾಸಿಗೆ ತೆರಳಿದ್ದರು. ಬಳಿಕ ಅವರು ವಾಪಸ್‌ ಮನೆಗೆ ಬಂದಿರಲಿಲ್ಲ.ಆತಂಕಗೊಂಡ ಮನೆಯವರು ಹುಡುಕಾಟ ನಡೆಸಿದ್ದು, ರಾತ್ರಿ ತನಕವೂ ಮಹಿಳೆಯ ಸುಳಿವು ಸಿಗಲಿಲ್ಲ. ಮರುದಿನ ಮುಂಜಾನೆ ಮಹಿಳೆಯ ಮೃತದೇಹ ಮನೆಗಿಂತ 200 ಮೀ. ದೂರದ ಗುಡ್ಡೆಯಲ್ಲಿ ಪತ್ತೆಯಾಗಿದೆ. ದೇಹದ ಕೆಲವೆಡೆ ಗಾಯಗಳು ಪತ್ತೆಯಾಗಿವೆ.

ಮಣಿಪಾಲ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ.ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕವಷ್ಟೆ ಮಹಿಳೆಯ ಸಾವಿನ ಬಗ್ಗೆ ನಿಖರ ಕಾರಣ ಗೊತ್ತಾಗಲಿದೆ.

- Advertisement -

Latest News

error: Content is protected !!