Thursday, June 4, 2026
Homeಕರಾವಳಿಮಂಗಳೂರುಕುಕ್ಕೆ ದೇಗುಲದಲ್ಲಿ ಶೀಘ್ರದಲ್ಲಿ ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಸಿಗಲಿದೆ ಸ್ವಯಂಚಾಲಿತ ರ‍್ಯಾಂಪ್‌ ಸೌಲಭ್ಯ

ಕುಕ್ಕೆ ದೇಗುಲದಲ್ಲಿ ಶೀಘ್ರದಲ್ಲಿ ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಸಿಗಲಿದೆ ಸ್ವಯಂಚಾಲಿತ ರ‍್ಯಾಂಪ್‌ ಸೌಲಭ್ಯ

- Advertisement -
- Advertisement -

ಸುಬ್ರಮಣ್ಯ: ಕುಕ್ಕೆ ದೇಗುಲದಲ್ಲಿ ಶೀಘ್ರದಲ್ಲಿ ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಸಿಗಲಿದೆ ಸ್ವಯಂಚಾಲಿತ ರ‍್ಯಾಂಪ್‌ ಸೌಲಭ್ಯ ಸಿಗಲಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೆಟ್ಟಿಲು ಹತ್ತಲು-ಇಳಿಯಲು ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಸ್ವಯಂಚಾಲಿತ ರ‍್ಯಾಂಪ್‌ ಅಳವಡಿಸಲಾಗುತ್ತಿದೆ. ಶೀಘ್ರದಲ್ಲೇ ಇದು ಭಕ್ತರ ಉಪಯೋಗಕ್ಕೆ ಸಿಗಲಿದೆ.

ಆಡಳಿತಾಧಿಕಾರಿ ಜುಬಿನ್ ಮೊಹಪಾತ್ರಾ ಕಳೆದ ವರ್ಷ ವಿಶೇಷ ಸಭೆ ನಡೆಸಿ ಈ ಸೌಲಭ್ಯದ ಯೋಜನೆ ರೂಪಿಸಿದ್ದರು. ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಪ್ರಮೋದ್ ಕುಮಾರ್ ಮತ್ತು ದೇವಸ್ಥಾನದ ಎಂಜಿನಿಯರ್‌ ಉದಯ ಕುಮಾರ್ ಅವರ ನೆರವಿನಲ್ಲಿ ಯೋಜನೆ ಜಾರಿಗೆ ಬಂದಿದೆ.

ನೆದರ್ಲೆಂಡ್‌ನಿಂದ ತಂದಿರುವ ರ‍್ಯಾಂಪ್‌ಗೆ ₹ 4.17 ಲಕ್ಷ ವೆಚ್ಚವಾಗಿದ್ದು ಎಎಆರ್‌ಡಿಐಐಎನ್‌ಜಿ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಇದನ್ನು ಅಳವಡಿಸುವ ಕಾರ್ಯದಲ್ಲಿ ತೊಡಗಿದೆ.

- Advertisement -

Latest News

error: Content is protected !!