Wednesday, June 3, 2026
Homeತಾಜಾ ಸುದ್ದಿಮದ್ಯದ ಅಮಲಿನಲ್ಲಿ ಆಟೋ ಚಲಾಯಿಸಿದ ಚಾಲಕ; ಚಲಿಸುತ್ತಿದ್ದ ಆಟೋರಿಕ್ಷಾದಿಂದ ರಕ್ಷಣೆಗಾಗಿ ಹೊರಕ್ಕೆ ಜಿಗಿದ ಮಹಿಳೆ

ಮದ್ಯದ ಅಮಲಿನಲ್ಲಿ ಆಟೋ ಚಲಾಯಿಸಿದ ಚಾಲಕ; ಚಲಿಸುತ್ತಿದ್ದ ಆಟೋರಿಕ್ಷಾದಿಂದ ರಕ್ಷಣೆಗಾಗಿ ಹೊರಕ್ಕೆ ಜಿಗಿದ ಮಹಿಳೆ

- Advertisement -
- Advertisement -

ಬೆಂಗಳೂರು: ಮದ್ಯದ ಅಮಲಿನಲ್ಲಿ ರಿಕ್ಷಾ ಚಲಾಯಿಸುತ್ತಿದ್ದ ಚಾಲಕನಿಂದ ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ಮಹಿಳೆಯೊಬ್ಬರು ಚಲಿಸುತ್ತಿದ್ದ ರಿಕ್ಷಾದಿಂದ ಹೊರಗೆ ಜಿಗಿದಿದ್ದು, ಈ ಕುರಿತಂತೆ ಅವರ ಪತಿ ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಆಫ್ ನ ಸುರಕ್ಷತೆ ಕುರಿತು ಟೀಕಿಸಿದ್ದಾರೆ. 

ಈ ಘಟನೆಯು ಬೆಂಗಳೂರಿನ ಹೊರಮಾವಿನ ಬಳಿ ಜ.02 ಗುರುವಾರದಂದು ನಡೆದಿದೆ ಎನ್ನಲಾಗಿದೆ.

ಘಟನೆಯ ಬಗ್ಗೆ ಮಹಿಳೆಯ ಪತಿ ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿಯಾಗಿ ಹಂಚಿಕೊಂಡಿದ್ದಾರೆ; “ನನ್ನ ಪತ್ನಿಯು ಬೆಂಗಳೂರಿನ ಹೊರಮಾವುವಿನಿಂದ ಥಣಿಸಂದ್ರಕ್ಕೆ ಹೋಗಲು ‘ಖಾಸಗಿ App ಮೂಲಕ ಆಟೋವನ್ನು ಬುಕ್‌ ಮಾಡಿದ್ದರು. ಆದರೆ ಆಟೋ ಚಾಲಕ ಮದ್ಯ ಸೇವಿಸಿದ್ದು, ಹೆಬ್ಬಾಳದ ಬಳಿ ಬೇರೊಂದು ದಾರಿಯಲ್ಲಿ ಚಲಿಸಿದ್ದ. ಈ ಸಂದರ್ಭದಲ್ಲಿ ಆಟೋವನ್ನು ನಿಲ್ಲಿಸುವಂತೆ ಪದೇ ಪದೇ ಕೇಳಿಕೊಂಡರು ಆತ ನಿಲ್ಲಿಸದೇ ಇದ್ದಾಗ ಬೇರೆ ದಾರಿ ಕಾಣದೆ ಆಕೆ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿಯಬೇಕಾಯಿತು. ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ಈ Appನಲ್ಲಿ ಯಾವುದೇ ಕಸ್ಟಮರ್‌ ಕೇರ್‌ ನಂಬರ್‌ ಕೂಡ ಇಲ್ಲ. ಇನ್ನು ಇದರ ದೊಡ್ಡ ಕೊರತೆಯೆಂದರೆ ಇಲ್ಲಿ ಗ್ರಾಹಕರಿಗೆ ಬೆಂಬಲವಿಲ್ಲ. “24 ಗಂಟೆ ಕಾಯಿರಿ” ಎಂದು ನಮಗೆ ಸಂದೇಶ ಬರುತ್ತದೆ. ತುರ್ತು ಪರಿಸ್ಥಿತಿಯಲ್ಲಿ 24 ಗಂಟೆಗಳ ಕಾಲ ಕಾಯಲು ಹೇಗೆ ಸಾಧ್ಯ? ಇದರಿಂದ ಮಹಿಳೆಯ ಸುರಕ್ಷತೆ ಹೇಗೆ ಸಾಧ್ಯ?” ಎಂದು ಬೆಂಗಳೂರು ಪೊಲೀಸರನ್ನು ಪ್ರಶ್ನಿಸಿದ್ದಾರೆ.

ಈ ಘಟನೆಯ ಬಗ್ಗೆ ಬೆಂಗಳೂರು ಪೊಲೀಸರು ತಕ್ಷಣ ಸ್ಪಂದಿಸಿದ್ದು, ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.

ಸದ್ಯ ಖಾಸಗಿ ಸಂಸ್ಥೆಯು ಈ ದೂರಿಗೆ ಪ್ರತಿಕ್ರಿಯಿಸಿದ್ದು, “ಹಾಯ್ ಅಜರ್, ನಿಮ್ಮ ಪತ್ನಿಗೆ ಉಂಟಾದ ಅನಾನುಕೂಲತೆಯ ಬಗ್ಗೆ ನಾವು ವಿಷಾದಿಸುತ್ತೇವೆ ಮತ್ತು ಅವರು ಈಗ ಚೆನ್ನಾಗಿದ್ದಾರೆ ಎಂದು ನಾವು ಭಾವಿಸುತ್ತೇವೆ. ದಯವಿಟ್ಟು ನಮಗೆ ಘಟನೆಯ ವಿವರಗಳ ಕುರಿತಾಗಿ ನೇರ ಸಂದೇಶವನ್ನು ಕಳುಹಿಸಿ. ನಾವು ಇದನ್ನು ತ್ವರಿತವಾಗಿ ಪರಿಶೀಲಿಸುತ್ತೇವೆ” ಎಂದು ತಿಳಿಸಿದ್ದಾರೆ ಎನ್ನಲಾಗಿದೆ. 

- Advertisement -

Latest News

error: Content is protected !!