ನೆಲ್ಯಾಡಿ: ದ.ಕ ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಬಳಿ, ಟ್ಯಾಂಕರ್ ಚಾಲಕರೊಂದಿಗೆ ಒಪ್ಪಂದ ಮಾಡಿಕೊಂಡು ಅಕ್ರಮವಾಗಿ ನಡೆಸುತ್ತಿದ್ದ ಬೃಹತ್ ಫರ್ನಿಶಿಂಗ್ ಆಯಿಲ್ ಮಿಕ್ಸಿಂಗ್ ಅಡ್ಡೆ ಮೇಲೆ ಪುತ್ತೂರು ಉಪ ವಿಭಾಗ ಪೊಲೀಸ್ ಉಪಾಧೀಕ್ಷಕರಾದ ಡಾ.ಗಾನ ಪಿ ಕುಮಾರ್ ನೇತೃತ್ವದಲ್ಲಿ ಪೊಲೀಸ್ ದಾಳಿ ನಡೆಸಲಾಗಿದೆ.


ದಾಳಿ ಸಂದರ್ಭ ಆರೋಪಿಗಳಾದ ಎಸ್.ದಾಸ್, ಸಿಂಗರಾಜ್, ಎಸ್.ಕಾರ್ತಿ ಮತ್ತು ಸೆಲ್ವ ರಾಜ್ ಬಂಧಿಸಲಾಗಿದೆ ಆರೋಪಿಗಳು .ಚಾಲಕರೊಂದಿಗೆ ಒಪ್ಪಂದ ಮಾಡಿಕೊಂಡು ಮಣ್ಣಗುಂಡಿ ಮನೆಗೆ ಕರೆಸಿ ಪ್ರತೀ ಟ್ಯಾಂಕರ್ ನಿಂದ 50 ರಿಂದ 200 ಲೀಟರ್ ಫರ್ನೆಸ್ ಆಯಿಲ್ ಕಳ್ಳತನ ಮಾಡಿ ಅನ್ ಲೋಡ್ ಮಾಡಿಸಿ ಬ್ರಹತ್ ಪ್ರಮಾಣದ ಅಕ್ರಮ ದಂದೆ ನಡೆಸುತ್ತಿದ್ದರು.

ಪಾಂಡಿ ಮತ್ತು ರಘುನಾಥನ್ ಎಂಬವರು ಈ ದಂಧೆಯ ಕಿಂಗ್ ಪಿನ್ ಆಗಿದ್ದು, ಇಬ್ಬರ ಹುಡುಕಾಟಕ್ಕೆ ಪೊಲೀಸರು ಇಳಿದಿದ್ದಾರೆ. ಇದರ ಹಿಂದೆ ಬಹು ದೊಡ್ಡ ಜಾಲ ಇರುವ ಶಂಕೆ ವ್ಯಕ್ತವಾಗಿದೆ.

ಘಟನೆಯಲ್ಲಿ ಭೂಗತ 2 ಟ್ಯಾಂಕ್ ಗಳು ಮತ್ತು 4 ಕಂಪಾರ್ಟ್ ಮೆಂಟ್ ನಿಂದ ಸುಮಾರು 10,500 ಲೀಟರ್ ದಾಸ್ತಾನು ಇರಿಸಿದ ಫರ್ನಿಶ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಎರಡು ಟ್ಯಾಂಕರ್ ಸಹಿತ ಇತರ ಸೊತ್ತುಗಳ ಮೌಲ್ಯ 35 ಲಕ್ಷ ಎಂದು ಅಂದಾಜಿಸಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.