Thursday, June 4, 2026
Homeಕರಾವಳಿಉಡುಪಿಮುಂಬೈಯಿಂದ ಮಂಗಳೂರಿಗೆ ರೈಲಿನಲ್ಲಿ ಹೊರಟಿದ್ದ ಮಹಿಳೆ ನಾಪತ್ತೆ

ಮುಂಬೈಯಿಂದ ಮಂಗಳೂರಿಗೆ ರೈಲಿನಲ್ಲಿ ಹೊರಟಿದ್ದ ಮಹಿಳೆ ನಾಪತ್ತೆ

- Advertisement -
- Advertisement -

ಮಂಗಳೂರು: ತವರು ಮನೆಗೆ ಹೋಗಲು ಮುಂಬೈಯ ನಗರದ ಥಾಣೆಯಿಂದ ರೈಲಿನಲ್ಲಿ ಮಂಗಳೂರಿಗೆ ಬರುತ್ತಿದ್ದ ಮಹಿಳೆ ಕಾಣೆಯಾಗಿದ್ದಾರೆ ಎಂದು ಮುಂಬೈಯ ಥಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಕ್ಷಿತಾ ಆರ್. ಕೋಟ್ಯಾನ್ ಎಂಬ ಮಹಿಳೆ ತನ್ನ ತಾಯಿಗೆ ತೀವ್ರ ಆರೋಗ್ಯದ ಸಮಸ್ಯೆ ಇದ್ದ ಕಾರಣ ಅವರನ್ನು ನೋಡಲು ರಾತ್ರಿ 10.45ಕ್ಕೆ 01133 ರೈಲಿನಲ್ಲಿ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಅದರಂತೆ ಮರುದಿನ ಮಧ್ಯಾಹ್ನ 1 ಗಂಟೆಗೆ ಉಡುಪಿಗೆ ತಲುಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಆ ಬಳಿಕ ಅವರು ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾರೆ.

ಈ ಮಹಿಳೆಯ ಬಗ್ಗೆ ಯಾವುದಾದರೂ ಸುಳಿವು ಸಿಕ್ಕಿದ್ದಲ್ಲಿ ರಾಜೇಶ್ ಮೊಬೈಲ್ ಸಂಖ್ಯೆ 83694 76654 ಸಂಪರ್ಕಿಸಲು ಕೋರಲಾಗಿದೆ.

- Advertisement -

Latest News

error: Content is protected !!