Wednesday, July 3, 2024
HomeWorldಅಫ್ಘಾನಿಸ್ತಾನ: ತಾಲಿಬಾನ್ ಜೊತೆ ಭಾರತ ಮಾತುಕತೆ!

ಅಫ್ಘಾನಿಸ್ತಾನ: ತಾಲಿಬಾನ್ ಜೊತೆ ಭಾರತ ಮಾತುಕತೆ!

spot_img
- Advertisement -
- Advertisement -

ಅಫ್ಘಾನಿಸ್ತಾನ:ಕತಾರ್ ನ ದೋಹಾದಲ್ಲಿರುವ ರಾಯಭಾರಿ ದೀಪಕ್ ಮಿತ್ತಲ್ ಅವರು ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ರನ್ನು ಬೇಟಿಯಾಗಿ ಚರ್ಚಿಸಿದ್ದಾರೆ.ಇದೆ ಮೊದಲ ಬಾರಿಗೆ ಭಾರತವು ತಾಲಿಬಾನ್ ಮುಖಂಡರೊಂದಿಗೆ ಮಾತುಕತೆಯನ್ನಡೆಸಿದೆ.

ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವ ಭಾರತೀಯ ಪ್ರಜೆಗಳ ಸುರಕ್ಷತೆ, ಭದ್ರತೆ ಮತ್ತು ಕ್ಷಿಪ್ರ ವಾಪಸಾತಿಯ ಬಗ್ಗೆ ಚರ್ಚೆಗಳು ಕೇಂದ್ರೀಕೃತವಾಗಿದೆ. ಭಾರತಕ್ಕೆ ಭೇಟಿ ನೀಡಲು ಬಯಸುವ ಆಫ್ಘನ್ ಪ್ರಜೆಗಳು, ವಿಶೇಷವಾಗಿ ಅಲ್ಪಸಂಖ್ಯಾತರ ಪ್ರಯಾಣದ ಬಗ್ಗೆಯೂ ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗಿದೆ. ತಾಲಿಬಾನ್ ಪಕ್ಷದ ಮನವಿಯ ಮೇರೆಗೆ ದೋಹಾದ ಭಾರತದ ರಾಯಭಾರ ಕಚೇರಿಯಲ್ಲಿ ಈ ಸಭೆ ನಡೆದಿದೆ ಎಂದು ಮಾಹಿತಿಯೊಂದು ಲಭಿಸಿದೆ.

ಆಫ್ಘಾನಿಸ್ತಾನದ ಮಣ್ಣನ್ನು ಯಾವುದೇ ರೀತಿಯಲ್ಲಿ ಭಾರತೀಯ ವಿರೋಧಿ ಚಟುವಟಿಕೆಗಳು ಮತ್ತು ಬೇರೆ ದೇಶಗಳ ಉಗ್ರರು ಭಯೋತ್ಪಾದನೆಗೆ ಬಳಸಿಕೊಳ್ಳದಂತೆ ಈ ಸಂದರ್ಭದಲ್ಲಿ ಪ್ರಸ್ತಾಪಿಸಲಾಗಿದ್ದು, ಈ ಸಮಸ್ಯೆಗಳನ್ನು ಸಕಾರಾತ್ಮಕವಾಗಿ ಪರಿಹರಿಸಲಾಗುವುದು ಎಂದು ತಾಲಿಬಾನ್ ಪ್ರತಿನಿಧಿ ರಾಯಭಾರಿಗೆ ಭರವಸೆ ನೀಡಿದರು ಎಂದು ಹೇಳಿಕೆ ತಿಳಿಸಿದೆ.

- Advertisement -
spot_img

Latest News

error: Content is protected !!