Wednesday, June 3, 2026
Homeತಾಜಾ ಸುದ್ದಿಬಂಟ್ವಾಳ: ಪಿಎಫ್‌ಐ ಕಾರ್ಯಕರ್ತರಿಂದ ಎನ್‌ಐಎ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ: ಭಜರಂಗದಳ ಖಂಡನೆ

ಬಂಟ್ವಾಳ: ಪಿಎಫ್‌ಐ ಕಾರ್ಯಕರ್ತರಿಂದ ಎನ್‌ಐಎ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ: ಭಜರಂಗದಳ ಖಂಡನೆ

- Advertisement -
- Advertisement -

ಬಂಟ್ವಾಳ: ಪಿಎಫ್‌ಐ ರಾಜ್ಯ ಕಾರ್ಯಕಾರಿಣಿ‌ ಸಮಿತಿ ಸದಸ್ಯನಾದ ರಿಯಾಜ್ ಪರಂಗಿಪೇಟೆ ಮನೆಗೆ  ಬೆಳಗ್ಗಿನ‌ ಜಾವ ಸುಮಾರು 4 ಗಂಟೆಗೆ‌ ರಾಷ್ಟ್ರೀಯ ತನಿಖಾ ದಳದ ಸಿಬ್ಬಂದಿ ದಾಳಿ ಮಾಡಿ ಹಲವು ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಿದೆ.


ದಾಳಿಯ ವಿಚಾರ ತಿಳಿಯುತ್ತಿದ್ದಂತೆ ನೂರಾರು ಪಿಎಫ್ಐ ಸಂಘಟನೆಗೆ ಸೇರಿದ ಕಾರ್ಯಕರ್ತರು ರಿಯಾಜ್ ಪರಂಗಿಪೇಟೆ ಮನೆ ಬಳಿ ಸೇರಿದ್ದಾರೆ. ಎನ್ಐಎ ತಂಡದ ವಿರುದ್ಧ ಪ್ರತಿಭಟನೆಯನ್ನು ನಡೆಸಿದ ಕಾರ್ಯಕರ್ತರು ಗೋ ಬ್ಯಾಕ್ ಎನ್ಐಎ ಎನ್ನುವ ಘೋಷಣೆಯೊಂದಿಗೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ.


ಬಂಟ್ವಾಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪಿಎಫ್ಐ ಕಾರ್ಯಕರ್ತರನ್ನು ಚದುರಿಸಿದ್ದಾರೆ. ಈ ನಡುವೆ ತನಿಖಾ ದಳದ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪಿಎಫ್ಐ ಸಂಘಟನೆಯ ನಡೆಯನ್ನು ಭಜರಂಗದಳ ಖಂಡಿಸಿದೆ.

- Advertisement -

Latest News

error: Content is protected !!