Wednesday, June 24, 2026
Homeತಾಜಾ ಸುದ್ದಿಬಿಜೆಪಿ ಮುಖಂಡನ ಹನಿ ಟ್ರ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಯುವತಿ ಜೊತೆ ರೆಡ್​ ಹ್ಯಾಂಡಾಗಿ ಸಿಕ್ಕಿ...

ಬಿಜೆಪಿ ಮುಖಂಡನ ಹನಿ ಟ್ರ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಯುವತಿ ಜೊತೆ ರೆಡ್​ ಹ್ಯಾಂಡಾಗಿ ಸಿಕ್ಕಿ ಬಿದ್ದ ಮಂಗಳೂರು ಮೂಲದ ಜಗನ್ನಾಥ್ ಶೆಟ್ಟಿ

- Advertisement -
- Advertisement -

ಮಂಡ್ಯ: ದಕ್ಷಿಣ ಕನ್ನಡ ಮೂಲದ ಚಿನ್ನದ ವ್ಯಾಪಾರಿ, ಬಿಜೆಪಿ ಮುಖಂಡ ಜಗನ್ನಾಥ್‌ ಶೆಟ್ಟಿ ಹನಿಟ್ರ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ.

ಆರ್​ಎಸ್​ಎಸ್​, ಬಿಜೆಪಿ ಮುಖಂಡ ಹನಿಟ್ರ್ಯಾಪ್​​ ಸುಳಿಯಲ್ಲಿ ಸಿಲುಕಿ ಹಾಕಿಕೊಂಡಿದ್ದು, 50 ಲಕ್ಷ ಹಣವನ್ನು ಸುಲಿಗೆ ಮಾಡಿಲಾಗಿದೆ ಎಂದು ಆರೋಪಿಸಿ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದ್ರೆ ಈ ಕೇಸ್‌ ಈಗ ಉಲ್ಟಾ ಆಗಿದೆ.

ಜಗನ್ನಾಥ್‌ ಶೆಟ್ಟಿ ನೀಡಿದ ದೂರಿನಲ್ಲಿ ತಾನು ಮಂಗಳೂರಿಗೆ ತೆರಳಲು ಮಂಡ್ಯದಲ್ಲಿ ಬಸ್​ಗಾಗಿ ಕಾಯುತ್ತಿದ್ದ ವೇಳೆ ನಾಲ್ವರು ಮೈಸೂರಿಗೆ ಡ್ರಾಪ್​ ಕೊಡುವುದಾಗಿ ಕಾರಿನಲ್ಲಿ ಕರೆದೊಯ್ದಿದ್ದರು. ನಂತರ ಚಿನ್ನದ ಪರೀಕ್ಷೆಗೆಂದು ಅಪಹರಿಸಿದ್ದಾರೆ. ಅಪಹರಿಸಿ ಲಾಡ್ಜ್​ ರೂಮ್​ಗೆ ಕರೆದುಕೊಂಡು ಹೋಗಿದ್ದಾರೆ. ರೂಮ್​ನಲ್ಲಿ ಯುವತಿ ಜೊತೆ ವಿಡಿಯೋ ಚಿತ್ರೀಕರಿಸಿಕೊಂಡು 4 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ. ಅಂತಿಮವಾಗಿ 50 ಲಕ್ಷ ರೂಪಾಯಿ ನೀಡಿ ತಾನು ತೆರಳಿದೆ.. ಇಷ್ಟಕ್ಕೆ ಸುಮ್ಮನಾಗದ ಗ್ಯಾಂಗ್ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಜಗನ್ನಾಥ್‌ ಶೆಟ್ಟಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇರೆಗೆ ಸಮಾಜ ಸೇವೆ, ಮಾನವ ಹಕ್ಕು ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಸಲ್ಮಾಭಾನು ಎಂಬುವರನ್ನು ಪಶ್ಚಿಮ ಠಾಣೆ ಪೊಲೀಸರು ಬಂಧಸಿದ್ದಾರೆ.

ಆದ್ರೆ ಲಾಡ್ಜ್ಗೆ ಹೋಗುವ ಮುನ್ನ ಯುವತಿ ಜೊತೆ ಬಿಜೆಪಿ ಮುಖಂಡ ಮಾತನಾಡಿದ್ದಾನೆ ಎನ್ನಲಾದ ಆಡಿಯೋ ವೈರಲ್ ಆದ ಬೆನ್ನಲ್ಲೇ ಲಾಡ್ಜ್‌ ನಲ್ಲಿ ಇವರಿಬ್ಬರೂ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ವಿಡಿಯೋ ಹೊಸ ತಿರುವು ಕೊಟ್ಟಿದೆ. ದಕ್ಷಿಣ ಕನ್ನಡ ಮೂಲದ ಜಗನ್ನಾಥ ಶೆಟ್ಟಿ ಮೈಸೂರಿನ ದರ್ಶನ್ ಲಾಡ್ಜ್ನಲ್ಲಿ ಯುವತಿ ಜೊತೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಹನಿಟ್ರ್ಯಾಪ್ ಕೇಸ್ ದಾಖಲಿಸಿದ್ದರ ಈ ಎಫ್‌ಐಆರ್ ನಲ್ಲಿರುವ ಅಂಶಕ್ಕೂ, ವೈರಲ್ ಆಗಿರುವ ವಿಡಿಯೋಗೂ ಭಾರೀ ವ್ಯತ್ಯಾಸವಿದೆ.‌

ವೀಡಿಯೋದಲ್ಲಿರೋ ಪ್ರಕಾರ, ಮೈಸೂರಿನ ದರ್ಶನ್ ಲಾಡ್ಜ್​​ಗೆ ಏಕಾಏಕಿ ಸಲ್ಮಾ ಗ್ಯಾಂಗ್ ನುಗ್ಗಿದ್ದು, ಯುವತಿ ಜೊತೆ ರೆಡ್​ ಹ್ಯಾಂಡಾಗಿ ಚಿನ್ನದ ವ್ಯಾಪಾರಿ ಕಂ ಬಿಜೆಪಿ ಮುಖಂಡ ಜಗನ್ನಾಥ್ ಶೆಟ್ಟಿ ಸಿಕ್ಕಿಬಿದ್ದಿದ್ದಾರೆ. ಕಾಲೇಜ್ ಲೆಕ್ಚರರ್ ಎಂದು ಲಾಡ್ಜ್​​ನಲ್ಲಿದ್ದು, ಯುವತಿ ಜೊತೆ ಜಗನ್ನಾಥ ಇರುವ ವಿಚಾರ ತಿಳಿದು ಅಲರ್ಟ್ ಆದ ಸಲ್ಮಾ ಗ್ಯಾಂಗ್​​ ತಕ್ಷಣ ಮೈಸೂರಿನ ದರ್ಶನ್ ಲಾಡ್ಜ್​ಗೆ ನುಗ್ಗಿದ್ದಾರೆ. ಒಳ ನುಗ್ಗುತ್ತಿದ್ದಂತೆ ಗ್ಯಾಂಗ್ ವಿಡಿಯೋ ಚಿತ್ರೀಕರಣ ಮಾಡಿದ್ದು, ಯುವತಿ, ಜಗನ್ನಾಥ ಶೆಟ್ಟಿಗೆ ಮನಬಂದಂತೆ ಥಳಿಸಿದ್ದಾರೆ. ಸದ್ಯ ಜಗನ್ನಾಥ ಶೆಟ್ಟಿ ನಡೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮೂವರು ಆರೋಪಿಗಳನ್ನು ಪೊಲೀಸರು ಜೈಲಿಗಟ್ಟಿದ್ದು, ಮಂಡ್ಯ ಪಶ್ಚಿಮ ವಿಭಾಗ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

- Advertisement -

Latest News

error: Content is protected !!