Thursday, June 4, 2026
Homeಕರಾವಳಿಬೆಳ್ತಂಗಡಿ; ಬೆಳಾಲು ಗ್ರಾಮದ ನಿಂತಿಕಲ್ಲು ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ ಸಪ್ತಾಹ

ಬೆಳ್ತಂಗಡಿ; ಬೆಳಾಲು ಗ್ರಾಮದ ನಿಂತಿಕಲ್ಲು ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ ಸಪ್ತಾಹ

- Advertisement -
- Advertisement -

ಬೆಳ್ತಂಗಡಿ: ಬೆಳಾಲು ಗ್ರಾಮದ ನಿಂತಿಕಲ್ಲು ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ನಡೆಯಿತು. ಬಾಲ ವಿಕಾಸ ಸಮಿತಿಯ ಅಧ್ಯಕ್ಷೆಯಾದ ಶ್ರೀಮತಿ ಉಷಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

 ಧರ್ಮಸ್ಥಳದ ಆರೋಗ್ಯ ಇಲಾಖೆಯ ಎಲ್ ಎಚ್ ವಿ  ಆದ ವಿಜಯಲಕ್ಷ್ಮಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ಕಾರ್ಯಕರ್ತೆ ಶ್ರೀಮತಿ ಹರಿಣಾಕ್ಷಿ ,ಗ್ರಾಮ ಪಂಚಾಯತಿ ಸದಸ್ಯೆಯಾದ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ, ಸಂಜೀವಿನಿ ಒಕ್ಕೂಟದ ಎಂ.ಬಿ.ಕೆಯಾದ ಹರಿಣಾಕ್ಷಿ , ಉಷಾ ದೇವಿ ಕಿನ್ಯಾಜೆ ಆಶಾ ಕಾರ್ಯಕರ್ತೆಯರಾದ ಪ್ರೇಮ .ಕೆ, ಶೀಲಾವತಿ ,ಪ್ರೇಮ ಹಾಗೂ ಗರ್ಭಿಣಿಯರು ಬಾಣಂತಿಯರು ಮಕ್ಕಳ ತಾಯಂದಿರು ಪೋಷಕರು ಸ್ತ್ರೀಶಕ್ತಿ ಸಂಘದ ಸದಸ್ಯರು, ಪುಟಾಣಿ ಮಕ್ಕಳು ಹಾಜರಿದ್ದರು.

ಈ ಸಂದರ್ಭದಲ್ಲಿ ವಿದ್ಯಾ ಶ್ರೀನಿವಾಸ್ ಗೌಡ ಇವರು ಅಂಗನವಾಡಿಯ ಎಲ್ಲಾ ಪುಟಾಣಿ ಗಳಿಗೆ ಡ್ರಾಯಿಂಗ್ ಪುಸ್ತಕ ಹಾಗೂ ಬಣ್ಣದ ಪೆನ್ಸಿಲ್ ನ್ನು ಕೊಡುಗೆಯಾಗಿ  ನೀಡಿದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಭಾರತಿ ಕಾರ್ಯಕ್ರಮವನ್ನು ನಿರೂಪಿಸಿ ಶ್ರೀಮತಿ ಶೀಲಾವತಿ ಧನ್ಯವಾದವಿತ್ತರು. ಸಹಾಯಕಿ ಶ್ರೀಮತಿ ವಿಮಲ ಸಹಕರಿಸಿದರು.

- Advertisement -

Latest News

error: Content is protected !!