Friday, March 29, 2024
Homeಕರಾವಳಿಉಡುಪಿಉಡುಪಿಯಲ್ಲಿ ದಿನಕಳೆದಂತೆ ಹೆಚ್ಚಾಗುತ್ತಿರುವ ಕಳವು ಪ್ರಕರಣ !

ಉಡುಪಿಯಲ್ಲಿ ದಿನಕಳೆದಂತೆ ಹೆಚ್ಚಾಗುತ್ತಿರುವ ಕಳವು ಪ್ರಕರಣ !

spot_img
- Advertisement -
- Advertisement -

ದಿನಕಳೆದಂತೆ ಉಡುಪಿಯಲ್ಲಿ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲಿಯೂ ಲಾಕ್ ಡೌನ್ ನಂತರ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ ಹೆಚ್ಚು ದಾಖಲಾಗಿದೆ.

2021ರ ನವೆಂಬರ್ 17ರವರೆಗೆ 89 ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದು, ಇದರಲ್ಲಿ 40 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 2,26,76,563 ರೂ. ಕಳವು ನಡೆದಿದೆ. ಅದರಲ್ಲಿ 21,21,198 ರೂ.ಗಳನ್ನು ಈಗಾಗಲೇ ಪತ್ತೆಹಚ್ಚಲಾಗಿದೆ.

ಲಾಕ್ ಡೌನ್ ನಂತರ ಕೆಲಸ ಕಳೆದುಕೊಂಡ ಅನ್ಯ ಜಿಲ್ಲೆಯವರು ಈ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ. ತುಂಬಾ ನಾಜೂಕಿನಿಂದ ಕಳ್ಳತನ ಮಾಡುತ್ತಾರೆ. ಪೊಲೀಸರ ಚಲನವಲನಗಳನ್ನು ಮೊದಲೇ ತಿಳಿದುಕೊಂಡು ಕೃತ್ಯ ಎಸಗುತ್ತಿದ್ದಾರೆ. ಈ ವರೆಗೆ ಪತ್ತೆಯಾದ ಪ್ರಕರಣಗಳಲ್ಲಿ ಅನ್ಯಜಿಲ್ಲೆ, ರಾಜ್ಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಜಿಲ್ಲಾದ್ಯಂತ ಕಳ್ಳತನ ಪ್ರಕರಣವನ್ನು ತಡೆಯುವ ನಿಟ್ಟಿನಲ್ಲಿ ಆಯಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಗಸ್ತು ವಾಹನಗಳೂ ಸಕ್ರಿಯವಾಗಿವೆ.

- Advertisement -
spot_img

Latest News

error: Content is protected !!