Wednesday, June 24, 2026
Homeತಾಜಾ ಸುದ್ದಿನಟ ದರ್ಶನ್‌ ಸೆಲ್‌ ಸುತ್ತಮುತ್ತಲಿದ್ದ ನಟೋರಿಯಸ್‌ ರೌಡಿಗಳು ಶಿಫ್ಟ್‌

ನಟ ದರ್ಶನ್‌ ಸೆಲ್‌ ಸುತ್ತಮುತ್ತಲಿದ್ದ ನಟೋರಿಯಸ್‌ ರೌಡಿಗಳು ಶಿಫ್ಟ್‌

- Advertisement -
- Advertisement -

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್‌ ಸೆಲ್‌ ಸುತ್ತಾಮುತ್ತಾ ಇದ್ದ ಆರೋಪಿಗಳನ್ನು ಬೇರೆ ಸೆಲ್‌ಗೆ ಶಿಫ್ಟ್‌ ಮಾಡಲಾಗಿದೆ ಎನ್ನಲಾಗಿದೆ.

ನಟ ದರ್ಶನ್‌ ಇಡಲಾಗಿದ್ದ ಸೆಲ್‌ಗೆ ಬಂದೋಬಸ್ತ್‌ ಮಾಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಟ ದರ್ಶನ್‌ ಸೆಲ್‌ ಸುತ್ತಾಮುತ್ತಾ ಇದ್ದ ನಟೋರಿಯಸ್‌ ರೌಡಿಗಳನ್ನು ಶಿಫ್ಟ್‌ ಮಾಡಲಾಗಿದೆ. ದರ್ಶನ್‌ ಸೆಲ್‌ಗೆ ಹೊಂದಿಕೊಂಡಿರುವ ಸೆಲ್‌ಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ.

ಈ ಹಿಂದೆ ರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗನ ಜೊತೆ ಹರಟೆ ಹೊಡೆಯುತ್ತಾ ಕುಳಿತಿದ್ದ ನಟ ದರ್ಶನ್‌ ಫೋಟೋ ವೈರಲ್‌ ಆಗಿದ್ದವು. ಈ ಬಗ್ಗೆ ಸುಪ್ರೀಂಕೋರ್ಟ್‌ ಎಚ್ಚರಿಕೆ ಬೆನ್ನಲ್ಲೇ ಪೊಲೀಸರು ನಿಗಾ ವಹಿಸಿದ್ದಾರೆ.

ವಿಲ್ಸನ್‌ ಗಾರ್ಡನ್‌ ನಾಗನ ಜೊತೆ ನಟ ದರ್ಶನ್‌ ಕುಳಿತುಕೊಂಡು ಸಿಗರೇಟು ಹೊಡೆದಿದ್ದ. ಲ್ಯಾನ್‌ನಲ್ಲಿ ಕುಳಿತು ಕಾಫಿ ಕುಡಿದ ಫೋಟೋಗಳು ವೈರಲ್‌ ಆಗಿದ್ದವು. ಈ ಬಗ್ಗೆ ಸುಪ್ರೀಂಕೋರ್ಟ್‌ ಎಚ್ಚರಿಕೆ ನೀಡಿದ ಬೆನ್ನಲ್ಲೇ ಜೈಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

- Advertisement -

Latest News

error: Content is protected !!