Thursday, June 4, 2026
Homeಕರಾವಳಿಮಂಗಳೂರು: ಸಂಚಾರಿ ಪೊಲೀಸರ ಯಡವಟ್ಟು; ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕನಿಗೆ ಹೆಲ್ಮೆಟ್ ಹಾಕದ್ದಕ್ಕೆ ನೊಟೀಸ್

ಮಂಗಳೂರು: ಸಂಚಾರಿ ಪೊಲೀಸರ ಯಡವಟ್ಟು; ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕನಿಗೆ ಹೆಲ್ಮೆಟ್ ಹಾಕದ್ದಕ್ಕೆ ನೊಟೀಸ್

- Advertisement -
- Advertisement -

ಮಂಗಳೂರು:  ಸಂಚಾರಿ ಪೊಲೀಸರ ಯಡವಟ್ಟವೊಂದು ಬಯಲಾಗಿದೆ. ಕಾರಿನಲ್ಲಿ ಸಹಪ್ರಯಾಣಿಕ ಹೆಲ್ಮೆಟ್ ಹಾಕಿಲ್ಲವೆಂದು ನಗರದ ಟ್ರಾಫಿಕ್ ಪೊಲೀಸರು ನೊಟೀಸ್ ನೀಡಿರುವ ಘಟನೆ ನಡೆದಿದೆ.

ಮಂಗಳೂರು ನಗರ ಸಂಚಾರಿ ಪೊಲೀಸರು ಕಾರಿನಲ್ಲಿ ಸಂಚರಿಸಿದ ಪ್ರಯಾಣಿಕ ಹೆಲ್ಮೆಟ್ ಧರಿಸಿಲ್ಲವೆಂದು 500 ರೂಪಾಯಿಗಳ ದಂಡ ಕಟ್ಟುವಂತೆ ಸೂಚಿಸಿದ್ದಾರೆ. ನವೆಂಬರ್‌ 29ರಂದು ಮಂಗಳಾದೇವಿಯಲ್ಲಿ ನಡೆದ ಟ್ರಾಫಿಕ್‌ ಉಲ್ಲಂಘನೆಗೆ ಸಂಬಂಧಿಸಿದಂತೆ ಈ ನೋಟಿಸ್‌ ಜಾರಿಯಾಗಿದ್ದು, ಡಿ.22ರಂದು ಚಾಲಕನ ಕೈಸೇರಿದೆ.

ನೋಟಿಸ್‌ನಲ್ಲಿ ಯಡವಟ್ಟಾಗಿ ಬೈಕ್ ಎಂಬುದರ ಬದಲು ಕಾರು ಎಂದು ನಮೂದಿಸಲಾಗಿದ್ದು, ಉಲ್ಲಂಘನೆ ರೀತಿ ಕಾಲಂನಲ್ಲಿ ಸಹಸವಾರ ಹೆಲ್ಮೆಟ್‌ ಧರಿಸಿಲ್ಲ ಎಂದಿದೆ. ನೋಟಿಸ್‌ನಲ್ಲಿ ಉಲ್ಲಂಘನೆ ನಡೆದ ಸ್ಥಳದ ಚಿತ್ರವಿದೆ. ಅದರಲ್ಲಿ ದ್ವಿಚಕ್ರ ವಾಹನವೊಂದರಲ್ಲಿ ಸಹ ಸವಾರ ಹೆಲ್ಮೆಟ್‌ ಇಲ್ಲದೆ ಸಂಚರಿಸುತ್ತಿರುವುದು ಕಾಣಿಸುತ್ತಿದ್ದು, ಸ್ವಲ್ಪ ದೂರದಲ್ಲಿ ಕಾರು ಕೂಡ ಇದೆ.

ಮಂಗಳೂರು ನಗರ ಸಂಚಾರ ಪೊಲೀಸ್‌ ಆಟೋಮೇಶನ್‌ ಸೆಂಟರ್‌ನಿಂದ ನೋಟಿಸ್‌ ಕಳುಹಿಸುವ ಸಂದರ್ಭ ದ್ವಿಚಕ್ರ ವಾಹನ ಸವಾರನಿಗೆ ನೋಟಿಸ್‌ ಕಳುಹಿಸುವ ಬದಲು ಕಾರು ಚಾಲಕನ ವಿಳಾಸಕ್ಕೆ ಕಳುಹಿಸಿರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಪೊಲೀಸರು ಮಾಡಿರುವ ಯಡವಟ್ಟು ಮಾತ್ರ ನಗಪಾಟಲಿಗೆ ಈಡಾಗಿದೆ.

- Advertisement -

Latest News

error: Content is protected !!