Friday, June 5, 2026
Homeತಾಜಾ ಸುದ್ದಿಉಡುಪಿಯ ನಿವಾಸಿ ಕತಾರ್ ನಲ್ಲಿ ನಿಧನ

ಉಡುಪಿಯ ನಿವಾಸಿ ಕತಾರ್ ನಲ್ಲಿ ನಿಧನ

- Advertisement -
- Advertisement -

ಉಡುಪಿ;ಕತಾರ್ ನಲ್ಲಿ ಉದ್ಯೋಗಿಯಾಗಿದ್ದ ಕೋಟದ ವ್ಯಕ್ತಿಯೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.ಕೋಟತಟ್ಟು ಪಡುಕರೆ ನಿವಾಸಿ ಮುಹಮ್ಮದ್ (45) ಕುಸಿದು ಬಿದ್ದು ಮೃತಪಟ್ಟಿದ್ದಾರೆ.ಮುಹಮ್ಮದ್ ಕತಾರ್ ನ ಸನಯ್ಯ ಎಂಬಲ್ಲಿ 14 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಜ.2ರಂದು ಊರಿಗೆ ಬರಲು ಸಿದ್ಧತೆ ನಡೆಸುತ್ತಿದ್ದರು.

ಆದರೆ ನಾಲ್ಕು ದಿನಗಳ ಹಿಂದೆ ಕೆಲಸ ಮಾಡುವಲ್ಲಿ ಕುಸಿದು ಬಿದ್ದು, ಮೆದುಳು ನಿಷ್ಕ್ರಿಯೆಗೊಂಡಿತ್ತು. ನಿನ್ನೆ ಚಿಕಿತ್ಸೆ ಫಲಿಸದೆ ಮುಹಮ್ಮದ್ ಮೃತಪಟ್ಟಿದ್ದಾರೆ. ಇವರು ಕೆಸಿಎಫ್ ಕತಾರ್ ಯುನಿಟ್ ನಲ್ಲೂ ಸಕ್ರಿಯರಾಗಿ ಕೆಲಸ‌ ಮಾಡುತ್ತಿದ್ದರು.

- Advertisement -

Latest News

error: Content is protected !!