Thursday, June 4, 2026
Homeಕರಾವಳಿಉಡುಪಿನಾನು ಹಗರಣ ಹೊರತೆಗೆಯಲು ಬಂದ ಸಚಿವನಲ್ಲ!: ಉಡುಪಿಯಲ್ಲಿ ಸುನೀಲ್ ಕುಮಾರ್ ಹೇಳಿಕೆ

ನಾನು ಹಗರಣ ಹೊರತೆಗೆಯಲು ಬಂದ ಸಚಿವನಲ್ಲ!: ಉಡುಪಿಯಲ್ಲಿ ಸುನೀಲ್ ಕುಮಾರ್ ಹೇಳಿಕೆ

- Advertisement -
- Advertisement -

ಉಡುಪಿ: ನಾನು ಹಗರಣಗಳನ್ನು ಹೊರತೆಗೆಯಲು ಬಂದ ಸಚಿವ ಅಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ಉಡುಪಿಯಲ್ಲಿ ಇಂದು ಮಾತನಾಡಿದ ಸುನೀಲ್ ಕುಮಾರ್, ನಾನು ಇಲಾಖೆಯಲ್ಲಿ ಸುಧಾರಣೆಗಳನ್ನು ಮಾಡಲು ಬಂದವನು,
ಇಲಾಖೆಯಲ್ಲಿ ಮತ್ತು ರಾಜ್ಯದಲ್ಲಿ ಸೀಮಿತ ಅವಧಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಶುಕ್ರವಾರ ಅಥವಾ ಶನಿವಾರ ನಾನು ಇಲಾಖೆಯ ಅಧಿಕಾರ ವಹಿಸಿಕೊಳ್ಳಲಿದ್ದೇನೆ ಎಂದು ತಿಳಿಸಿರುವ ಸಚಿವ ಸುನೀಲ್ ಕುಮಾರ್, ನಮ್ಮ ರಾಜ್ಯ ಮತ್ತು ಇಲಾಖೆಯ ಹಿತಾಸಕ್ತಿಯನ್ನು ನಾವು ಕಾಪಾಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.‌

ಇದೇ ವೇಳೆ, ದೇಶಾದ್ಯಂತ ನಾಳೆ ವಿದ್ಯುತ್ ನೌಕರರ ಮುಷ್ಕರ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವರು, ಕೆಪಿಟಿಸಿಎಲ್ ಕಾರ್ಮಿಕ ಸಂಘಟನೆಗಳು ಭೇಟಿಯಾಗಿವೆ, ಇಲಾಖೆಯ ಖಾಸಗೀಕರಣದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ, ಕೇಂದ್ರದ ಬಿಲ್ ಏನಿದೆ ಎಂಬುದನ್ನು ಪರಾಮರ್ಶಿಸುತ್ತೇನೆ, ಅಧಿಕಾರ ವಹಿಸಿಕೊಂಡ ನಂತರ ಈ ಬಗ್ಗೆ ಪ್ರತಿಕ್ರಿಯಿಸುತ್ತೇನೆ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!