Thursday, June 4, 2026
Homeಕರಾವಳಿಉಡುಪಿಮಂಗಳೂರು: ಕೇರಳ ದಲ್ಲಿ ನ್ಯೂರೊ ವೈರಸ್‌ ಪತ್ತೆ...! ದ.ಕ ದಲ್ಲಿ ನಿಗಾ ವಹಿಸುವಂತೆ ಆರೋಗ್ಯ ಇಲಾಖೆಯಿಂದ...

ಮಂಗಳೂರು: ಕೇರಳ ದಲ್ಲಿ ನ್ಯೂರೊ ವೈರಸ್‌ ಪತ್ತೆ…! ದ.ಕ ದಲ್ಲಿ ನಿಗಾ ವಹಿಸುವಂತೆ ಆರೋಗ್ಯ ಇಲಾಖೆಯಿಂದ ಸೂಚನೆ…!

- Advertisement -
- Advertisement -

ಮಂಗಳೂರು: ಕೇರಳ ದಲ್ಲಿ ನ್ಯೂರೊ ವೈರಸ್‌ ಪತ್ತೆಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ನಿಗಾ ವಹಿಸಲು ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ.

ಭೇದಿ, ಹೊಟ್ಟೆನೋವು, ವಾಂತಿ, ಜ್ವರ ನ್ಯೂರೋ ವೈರಸ್‌ ಸೋಂಕಿನ ಲಕ್ಷಣವಾಗಿದ್ದು, ಈ ಲಕ್ಷಣಗಳು ಗುಂಪಾಗಿ ಕಂಡುಬಂದರೆ ತತ್‌ಕ್ಷಣ ಮಾಹಿತಿ ರವಾನಿಸಬೇಕು ಎಂದು ಜಿಲ್ಲೆಯ ಎಲ್ಲ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸುತ್ತೋಲೆ ರವಾನಿಸಲಾಗಿದೆ.

ಸರಕಾರ ಹೊರಡಿಸಿರುವ ಸೂಚನೆಯಂತೆ ನ್ಯೂರೋ ಸೋಂಕು ಪ್ರಕರಣ ನೋಡಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಅವರು ಪ್ರತೀ ದಿನವೂ ವರದಿಯನ್ನು ರಾಜ್ಯ ಆರೋಗ್ಯ ಇಲಾಖೆಗೆ ಕಳುಹಿಸಿ ಕೊಡಲು ಸೂಚಿಸಲಾಗಿದೆ.

- Advertisement -

Latest News

error: Content is protected !!