Saturday, June 6, 2026
HomeUncategorizedಬಾಲಿವುಡ್​ನ ಖ್ಯಾತ ಐಟಂ ಡ್ಯಾನ್ಸರ್ 'ನೋರಾ ಫತೇಹಿ' ಬೆಲ್ಲಿ ಡಾನ್ಸ್ ಗೆ ಅಭಿಮಾನಿಗಳು ಫಿದಾ.!

ಬಾಲಿವುಡ್​ನ ಖ್ಯಾತ ಐಟಂ ಡ್ಯಾನ್ಸರ್ ‘ನೋರಾ ಫತೇಹಿ’ ಬೆಲ್ಲಿ ಡಾನ್ಸ್ ಗೆ ಅಭಿಮಾನಿಗಳು ಫಿದಾ.!

- Advertisement -
- Advertisement -

ಮುಂಬೈ: ನಟಿ ನೋರಾ ಫತೇಹಿರ ದಿಲ್​ಬರ್, ಕಮರಿಯಾ, ಸಾಕಿ ಸಾಕಿ, ಏಕ್ ಟು ಕೇಮ್ ಜಿಂದಗಾನಿ ಮತ್ತು ಸಮ್ಮರ್ ಸಾಂಗ್ ಯಾರಿಗೆ ಗೊತ್ತಿಲ್ಲ ಹೇಳಿ. ಇವರ ಈ ಹಾಡುಗಳು ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿದ್ದು ಗೊತ್ತೇ ಇದೆ. ಇದೀಗ ಈ‌ ನಟಿ ಸಾಮಾಜಿಕ‌ ಜಾಲತಾಣದಲ್ಲೊಂದು ಡಾನ್ಸ್ ವಿಡಿಯೋ‌ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ‌ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.

https://www.instagram.com/p/CCIlJCVpQkJ/?utm_source=ig_embed

ಹೌದು, 2018ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ನಟಿ ಬೆಲ್ಲಿ ನೃತ್ಯ ಪ್ರದರ್ಶಿಸಿದ್ದರು. ಈ ಬೆಲ್ಲಿ ಡಾನ್ಸ್ ಸಕ್ಕತ್ ವೈರಲ್ ಆಗುವುದರ ಜೊತೆಗೆ ಸಾಕಷ್ಟು ಅವಕಾಶಗಳು ಅರಸಿ ಬಂದಿದ್ದವು.

ಇದೀಗ ಬಾಲಿವುಡ್​ನ ನಂಬರ್ 1 ಐಟಂ ಡ್ಯಾನ್ಸರ್ ಆಗುತ್ತಿದ್ದಾರೆ ಈ ನಟಿ. ಇದೀಗ ಈ ಡಾನ್ಸ್ ವಿಡಿಯೋವನ್ನು ನಟಿ ಇಂಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ಈ ಡಾನ್ಸ್ ನಂತರ ಬಂದ ಅವಕಾಶಗಳ ಬಗ್ಗೆಯೂ ಬರೆದುಕೊಂಡಿದ್ದಾರೆ. ಈ ನಟಿಗೆ ಇನ್​ಸ್ಟಾಗ್ರಾಂ​ನಲ್ಲಿ 14 ಮಿಲಿಯನ್ ಫಾಲೋವರ್ಸ್​ ಇದ್ದು, ಈ ಖುಷಿಯನ್ನು ವಿಭಿನ್ನವಾಗಿ ಹಂಚಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಈ ನಟಿ ಸೊಂಟ ಬಳುಕಿಸಿದರೆ ಆ ಸಿನಿಮಾ ಹಿಟ್ ಆಗುತ್ತದೆ ಎನ್ನೋ‌ ಮಾತಿದೆ.

- Advertisement -

Latest News

error: Content is protected !!