Friday, June 5, 2026
Homeಉದ್ಯಮಇನ್ನು ಮುಂದೆ ಕೊರೋನಾ ಉಚಿತ ಟೆಸ್ಟ್ ಇಲ್ಲ: ಸರ್ಕಾರದ ಆದೇಶ

ಇನ್ನು ಮುಂದೆ ಕೊರೋನಾ ಉಚಿತ ಟೆಸ್ಟ್ ಇಲ್ಲ: ಸರ್ಕಾರದ ಆದೇಶ

- Advertisement -
- Advertisement -

ಬೆಂಗಳೂರು: ಹೊರ ರಾಜ್ಯಗಳಿಂದ ಬಂದವರಿಗೆ ಇನ್ನು ಮುಂದೆ ಉಚಿತ ಕೊರೋನಾ ಪರೀಕ್ಷೆ ಇರುವುದಿಲ್ಲ. ಹೊರ ರಾಜ್ಯದಿಂದ ಬಂದವರು ಖಾಸಗಿ ಲ್ಯಾಬ್ ಗಳಲ್ಲಿ 650 ರೂಪಾಯಿ ಪಾವತಿಸಿ ತಾವೇ ಕೊರೋನಾ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಆದೇಶಿಸಿದೆ.

ರಾಜ್ಯ ಸರ್ಕಾರದ ವತಿಯಿಂದ ಉಚಿತವಾಗಿ ಕೊರೋನಾ ಟೆಸ್ಟ್ ಮಾಡಿಸಲಾಗುತ್ತಿತ್ತು. ಈಗ ಉಚಿತ ಟೆಸ್ಟ್ ಸೌಲಭ್ಯ ಸ್ಥಗಿತಗೊಳಿಸಲಾಗಿದೆ. 8 ಖಾಸಗಿ ಲ್ಯಾಬ್ ಗಳನ್ನು ಗುರುತಿಸಲಾಗಿದ್ದು, 650 ರೂಪಾಯಿ ಪಾವತಿಸಿ ಹೊರಗಿನಿಂದ ಬಂದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ.

ವಿಮಾನ ಮತ್ತು ರೈಲು ನಿಲ್ದಾಣಗಳಲ್ಲಿ ನಿಗದಿತ ಜಾಗಗಳಲ್ಲಿ ಮಾದರಿ ಸಂಗ್ರಹಿಸಿ ವರದಿಯನ್ನು ತ್ವರಿತವಾಗಿ ನೀಡುವಂತೆ ಸೂಚನೆ ನೀಡಲಾಗಿದೆ. ಅದೇ ರೀತಿ ಹೊರರಾಜ್ಯದಿಂದ ಆಗಮಿಸಿದ ಎಲ್ಲರಿಗೂ ಕ್ವಾರಂಟೈನ್ ನಲ್ಲಿ ಇರಿಸದೇ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯಗಳಿಂದ ಬಂದವರಿಗೆ ಮಾತ್ರ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ. ಉಚಿತ ಕೊರೋನಾ ಪರೀಕ್ಷೆ ಕೆಲ ವರ್ಗದವರಿಗೆ ಮಾತ್ರ ಇರುತ್ತದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!