Friday, May 17, 2024
Homeಕರಾವಳಿಉಡುಪಿಕರಾವಳಿಯಲ್ಲಿ ಆಗಸ್ಟ್ 11 ರವರೆಗೆ ಆಳ ಸಮುದ್ರ ಮೀನುಗಾರಿಕೆ ನಿಷೇಧ

ಕರಾವಳಿಯಲ್ಲಿ ಆಗಸ್ಟ್ 11 ರವರೆಗೆ ಆಳ ಸಮುದ್ರ ಮೀನುಗಾರಿಕೆ ನಿಷೇಧ

spot_img
- Advertisement -
- Advertisement -

ಮಂಗಳೂರು:ಆಗಸ್ಟ್​ 1ರಿಂದ ಮೀನುಗಾರಿಕಾ ಋತು ಆರಂಭಗೊಂಡಿದೆ. ಆದರೆ ಅತಿಯಾದ ಮಳೆಯಿಂದಾಗಿ ಕಡಲ ಮೀನುಗಾರಿಕೆಗೆ ತೆರಳಲು ಅವಕಾಶವಿಲ್ಲದಂತಾಗಿದೆ .

ಭಾರೀ ಮಳೆ ಹಿನ್ನೆಲೆಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ಆಗಸ್ಟ್​ 11ರವರೆಗೆ ಮೀನುಗಾರಿಕಾ ಇಲಾಖೆ ನಿಷೇಧ ಹೇರಿದೆ. ಕಡಲು ಪ್ರಕ್ಷುಬ್ಧವಾಗಿರುವ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ.


ಮೀನುಗಾರಿಕೆಯ ಋತು ಆರಂಭಗೊಂಡಿದ್ದರೂ ಸಹ ಮಂಗಳೂರಿನ ಬಂದರಿನಲ್ಲಿಯೇ ನೂರಾರು ದೋಣಿಗಳು ಲಂಗರು ಹಾಕಿವೆ. ಆಗಸ್ಟ್​ ಐದರಿಂದ ಆಳ ಸಮುದ್ರದ ಮೀನುಗಾರಿಕೆಗೆ ತೆರಳಬೇಕು ಎಂದು ಮೀನುಗಾರರು ಸಿದ್ಧತೆ ನಡೆಸಿದ್ದರು. ಆದರೆ ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಡಲ ಅಬ್ಬರ ಕೂಡ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಸಮುದ್ರದಲ್ಲಿ ಗಾಳಿಯ ವೇಗ ಹಾಗೂ ಅಲೆಗಳ ಅಬ್ಬರ ಅತಿಯಾಗಿ ಇರುತ್ತದೆ. ಹೀಗಾಗಿ ಹವಾಮಾನ ಇಲಾಖೆ ಕೂಡ ಯಾರಿಗೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ .

- Advertisement -
spot_img

Latest News

error: Content is protected !!