Wednesday, May 8, 2024
Homeತಾಜಾ ಸುದ್ದಿಯುಪಿಐ ಪಾವತಿ ಮೇಲೆ ಶುಲ್ಕ ವಿಧಿಸುವುದಿಲ್ಲ: ವಿತ್ತ ಸಚಿವಾಲಯ ಸ್ಪಷ್ಟನೆ

ಯುಪಿಐ ಪಾವತಿ ಮೇಲೆ ಶುಲ್ಕ ವಿಧಿಸುವುದಿಲ್ಲ: ವಿತ್ತ ಸಚಿವಾಲಯ ಸ್ಪಷ್ಟನೆ

spot_img
- Advertisement -
- Advertisement -

ನವದೆಹಲಿ: ಆನ್​ಲೈನ್​ ಹಣ ಪಾವತಿಯಲ್ಲಿ ಯುಪಿಐ ಪಾವತಿಗಳ ಮೇಲೆ ಶುಲ್ಕ ವಿಧಿಸುವುದಿಲ್ಲ ಎಂದು ವಿತ್ತ ಸಚಿವಾಲಯ ಸ್ಪಷ್ಟನೆ ನೀಡಿದೆ. ಯುಪಿಐ, ನೆಫ್ಟ್​ನಂತಹ ಆನ್​ಲೈನ್​ ಪಾವತಿಗಳಿಗೆ ಶುಲ್ಕ ವಿಧಿಸುವ ಬಗ್ಗೆ ರಿಸರ್ವ್ ಬ್ಯಾಂಕ್​ ಜನರ ಅಭಿಪ್ರಾಯ ಸಂಗ್ರಹಿಸುತ್ತಿದೆ ಎಂದು ಶನಿವಾರ ವರದಿಯಾಗಿತ್ತು.

ಸುದ್ದಿಗೆ ಸ್ಪಷ್ಟೀಕರಣ ನೀಡಿರುವ ವಿತ್ತ ಸಚಿವಾಲಯ, ಯುಪಿಐ ಪೇಮೆಂಟ್​ ಜನರಿಗೆ ಭಾರಿ ಅನುಕೂಲ ನೀಡಿದೆ. ಇದು ಡಿಜಿಟಲ್​ ಹಣ ಪಾವತಿಯಲ್ಲಿ ಯಶಸ್ಸು ಸಾಧಿಸಿದೆ. ಜನರ ಅನುಕೂಲಕ್ಕೋಸ್ಕರ ಇರುವ ವ್ಯವಸ್ಥೆಯ ಮೇಲೆ ಯಾವುದೇ ಸೇವಾ ಶುಲ್ಕ ಜಾರಿ ಮಾಡುವುದಿಲ್ಲ ಎಂದು ಹೇಳಿದೆ.

ಯುಪಿಐ ಕಂಪನಿಗಳ ಚೇತರಿಕೆಗೆ ಅನ್ಯ ಕ್ರಮ ಜಾರಿ ಮಾಡಲಾಗುವುದು. ಸರ್ಕಾರ ಕಳೆದ ವರ್ಷ ನೀಡಿದಂತೆ ಈ ವರ್ಷವೂ ಆರ್ಥಿಕ ನೆರವು ನೀಡಲಿದೆ. ಜನರ ಮೇಲೆ ಈ ಹೊರೆಯನ್ನು ಹಾಕುವುದಿಲ್ಲ ಎಂದು ಸ್ಪಷ್ಟನೆಯಲ್ಲಿ ತಿಳಿಸಿದೆ.

- Advertisement -
spot_img

Latest News

error: Content is protected !!