- Advertisement -
![]()
- Advertisement -
ಬಂಟ್ವಾಳ; ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ಪೂರ್ವ ತಯಾರಿ ವೀಕ್ಷಣೆಗೆ ಕದ್ರಿ ಕದಲಿ ಜೋಗಿ ಮಠಾಧಿಶ್ವರ ಶ್ರೀ ಶ್ರೀ ಶ್ರೀ ನಿರ್ಮಲನಾಥ್ ಜೀ ಮಹಾರಾಜ್ ಭೇಟಿ ನೀಡಿದರು.
ಇಂದಿನ ರುದ್ರಪಾರಾಯಣದ ದೀಪ ಪ್ರಜ್ವಲನೆ ಸ್ವಾಮೀಜಿ ನೆರವೇರಿಸಿದರು. ಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಸ್ವಾಮೀಜಿಯ ಪುಣ್ಯ ಹಸ್ತದ ಮೂಲಕ ನೆರವೇರಿಸಿದರು. ಗೌರವ ಅಧ್ಯಕ್ಷರಾದ ರಘುನಾಥ್ ಸೋಮಯಾಜಿ, ಕಾರ್ಯಧ್ಯಕ್ಷ ಜಗನ್ನಾಥ ಚೌಟ, ಸಂತೋಷ್ ಶೆಟ್ಟಿ ಅರೆಬೆಟ್ಟು ದುರ್ಗಾಂಬಾ ಕನ್ಸ್ಟ್ರಕ್ಷನ್, ಶಂಕರನಾರಾಯಣ ಭಟ್ ಕೆಲಿಂಜ, ಯುವಕ ಮಂಡಲ ಬಾಳ್ತಿಲ, ಓಡಿಯೂರು ಶ್ರೀ ಗ್ರಾಮ ವಿಕಾಶ ಕಲ್ಲಡ್ಕ ಘಟಕದ ಸದಸ್ಯರು, ಶಂಭುಗ ಫ್ರೆಂಡ್ಸ್ ಶಂಭುಗ, ಯಾಗ ಸಮಿತಿ ಸದಸ್ಯರು, ಮುಖಂಡರು ಹಾಗೂ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.
- Advertisement -


