Saturday, June 6, 2026
Homeಕರಾವಳಿಮಂಗಳೂರುನೆಲ್ಯಾಡಿ: ಅಪ್ರಾಪ್ತೆಯನ್ನು ಗರ್ಭಿಣಿಯಾಗಿಸಿದಾತ ಅರೆಸ್ಟ್

ನೆಲ್ಯಾಡಿ: ಅಪ್ರಾಪ್ತೆಯನ್ನು ಗರ್ಭಿಣಿಯಾಗಿಸಿದಾತ ಅರೆಸ್ಟ್

- Advertisement -
- Advertisement -

ನೆಲ್ಯಾಡಿ: ಅಪ್ರಾಪ್ತೆಯನ್ನು ಗರ್ಭಿಣಿಯಾಗಿಸಿದಾತನನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ. ಕೌಕ್ರಾಡಿಯ ರಮೇಶ್ ಬಂಧಿತ ಆರೋಪಿ. ಈತನನ್ನು ಪೋಕ್ಸೋ ಕಾಯ್ದೆಯಡಿ ಉಪ್ಪಿನಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪಿಯುಸಿ ವಿದ್ಯಾಬ್ಯಾಸ  ಅರ್ಧದಲ್ಲಿ ಮೊಟಕುಗೊಳಿಸಿ ಮನೆಯಲ್ಲಿದ್ದ  16 ವರ್ಷದ  ಬಾಲಕಿಯ ಜೊತೆ  ದೂರದ ಸಂಬಂಧಿ  ರಮೇಶ್ ಎಂಬಾತ ಹಲವು ಬಾರಿ ಬಲತ್ಕಾರವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಆರೋಪಿಸಲಾಗಿದೆ. ಮಾ.29ರಂದು ಉಪ್ಪಿನಂಗಡಿ ಪೊಲೀಸರು, ಮಕ್ಕಳ ಸಹಾಯವಾಣಿ ಸಿಬ್ಬಂದಿ, ಶಿಶು ಅಭಿವೃದ್ಧಿ ಇಲಾಖೆಯವರು ಬಾಲಕಿಯನ್ನು  ಮನೆಯಿಂದ ಕರೆದುಕೊಂಡು ಬಂದು ಮಂಗಳೂರು ಕಾವೂರಿನಲ್ಲಿರುವ ಬಾಲಕಿಯರ ಬಾಲ ಮಂದಿರಕ್ಕೆ ಸೇರಿಸಿದ್ದಾರೆ.  ಎ.1ರಂದು ಬಾಲ ಮಂದಿರದ ಆಪ್ತ ಸಮಾಲೋಚಕರು ವಿಚಾರಣೆ ನಡೆಸಿದಾಗ ಸಂತ್ರಸ್ತೆ, ಆರೋಪಿಯು  ಲೈಂಗಿಕ ಸಂಪರ್ಕ ಮಾಡಿರುವುದಾಗಿ ತಿಳಿಸಿದ್ದು, ಅದರಂತೆ ಎ.2ರಂದು ಮಂಗಳೂರು ಲೇಡಿಗೋಶನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಬಾಲಕಿ ಗರ್ಭಿಣಿ ಎಂಬುದು ತಿಳಿದುಬಂದಿದೆ.ಆದರೆ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!