Sunday, June 7, 2026
Homeಕರಾವಳಿ'ನಿನ್ನಿಕಲ್ಲು ಅತ್ಯಾಚಾರಯತ್ನ ಪ್ರಕರಣ'ದಲ್ಲಿ ಜೈಲಿಗೆ ಹೋಗಿ ಬಂದಾತ ಆತ್ಮ ಹತ್ಯೆಗೆ ಶರಣು

‘ನಿನ್ನಿಕಲ್ಲು ಅತ್ಯಾಚಾರಯತ್ನ ಪ್ರಕರಣ’ದಲ್ಲಿ ಜೈಲಿಗೆ ಹೋಗಿ ಬಂದಾತ ಆತ್ಮ ಹತ್ಯೆಗೆ ಶರಣು

- Advertisement -
- Advertisement -

ಬೆಳ್ತಂಗಡಿ : ಇಲ್ಲಿನ ಉಜಿರೆ ಗ್ರಾಮದ ನಿನ್ನಿಕಲ್ಲು ಎಂಬಲ್ಲಿನ ಇಕ್ಬಾಲ್ ಸಾಧಿಕ್(27) ಎಂಬಾತ ಆಡು ಮೇಯಿಸಲು ಹೋಗಿದ್ದ ಪರಿಶಿಷ್ಟ ಜಾತಿಯ ಯುವತಿಯನ್ನು ಅಡ್ಡಗಟ್ಟಿ ಅತ್ಯಾಚಾರ ಮಾಡಲು ಯತ್ನಿಸಿದಾಗ ಸಾರ್ವಜನಿಕರು ಹಿಡಿದು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದರು ಬಳಿಕ ಈತನ ಮೇಲೆ ಅಟ್ರಾಸಿಟಿ ಅಡಿಯಲ್ಲಿ ಅತ್ಯಾಚಾರ ಯತ್ನ‌ ಕೇಸು ದಾಖಲಾಗಿ ಜೈಲು ಪಾಲಾಗಿದ್ದ.

ಕೆಲದಿನದ ಹಿಂದೆ ಈತ ಜೈಲಿನಿಂದ ಜಾಮೀನು ಪಡೆದು ದಿನಾಂಕ 7-08-2020 ರಂದು ಜೈಲಿನಿಂದ ಬಂದಿದ್ದ.‌ ಬಳಿಕ ಈ ಪ್ರಕರಣದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ. ನಿನ್ನೆ ಮುಂಡೂರು ಬಳಿ ರಫೀಕ್ ಎಂಬಾತನಿಗೂ ಇಕ್ಬಾಲ್ ಸಾಧಿಕ್ ಮತ್ತಿತ್ತರರಿಗೆ ಸಣ್ಣಪುಟ್ಟ ಗಲಾಟೆ ನಡೆದಿತ್ತು ಇದರಿಂದ ರಫೀಕ್ ತನ್ನ ಮೇಲೆ ದೂರು ನೀಡಬಹುದು ಎಂಬ ಕಾರಣಕ್ಕೆ ಭಯಗೊಂಡು ಇಂದು ಮನೆಯ ಕೋಣೆಯಲ್ಲಿ ಕುತ್ತಿಗೆಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ‌. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!