Thursday, June 4, 2026
Homeತಾಜಾ ಸುದ್ದಿಅದ್ಧೂರಿಯಾಗಿ ನಡೆಯಿತು ನಿಖಿಲ್ ಕುಮಾರಸ್ವಾಮಿ ಪುತ್ರನ ನಾಮಕರಣ: ದೇವೇಗೌಡರ ಮರಿ ಮೊಮ್ಮಗನ ಹೆಸರೇನು ಗೊತ್ತಾ?

ಅದ್ಧೂರಿಯಾಗಿ ನಡೆಯಿತು ನಿಖಿಲ್ ಕುಮಾರಸ್ವಾಮಿ ಪುತ್ರನ ನಾಮಕರಣ: ದೇವೇಗೌಡರ ಮರಿ ಮೊಮ್ಮಗನ ಹೆಸರೇನು ಗೊತ್ತಾ?

- Advertisement -
- Advertisement -

ಬೆಂಗಳೂರು: ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರ ಮೊಮ್ಮಗನ ನಾಮಕರಣ ಶಾಸ್ತ್ರ ಅದ್ದೂರಿಯಾಗಿ ನೆರವೇರಿದ್ದು, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. 2021ರ ಸೆಪ್ಟೆಂಬರ್​ 24ರಂದು ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ದಂಪತಿಗೆ ಗಂಡು ಮಗು ಜನಿಸಿತ್ತು.

ಇದೀಗ ಪುಟ್ಟ ಕಂದನಿಗೆ ಕುಟುಂಬಸ್ಥರು ನಾಮಕರಣ ಶಾಸ್ತ್ರ ಮಾಡುವ ಮೂಲಕ ಹೆಸರಿಟ್ಟಿದ್ದಾರೆ. ಬೆಂಗಳೂರಿನ ಜೆಪಿ ನಗರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಬುಧವಾರ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸೇರಿದಂತೆ ದೇವೇಗೌಡರ ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಕಾರ್ಯಕ್ರಮ ನೆರವೇರಿತು. ‘ಅವ್ಯಾನ್ ದೇವ್’ ಎಂದು ನಿಖಿಲ್ ಪುತ್ರನಿಗೆ ಹೆಸರಿಟ್ಟು ಆಶೀರ್ವದಿಸಿದರು. ವಿವಿಧ ಹೂವಿನಿಂದ ಅಲಂಕಾರ ಮಾಡಲಾಗಿದ್ದ ಬೆಳ್ಳಿ ತೊಟ್ಟಿಲು ಆಕರ್ಷಿಸುತ್ತಿತ್ತು.

- Advertisement -

Latest News

error: Content is protected !!