Sunday, June 7, 2026
Homeತಾಜಾ ಸುದ್ದಿಪ್ರೀತಿಸಿ ಮದುವೆಯಾಗಿ ಮನೆಗೆ ಬರುತ್ತಿದ್ದಂತೆ ವಧು ವರನಿಗೆ ಫೈಟ್; ಗಂಭೀರ ಗಾಯಗೊಂಡ ಮದುಮಗಳು ಸಾವು

ಪ್ರೀತಿಸಿ ಮದುವೆಯಾಗಿ ಮನೆಗೆ ಬರುತ್ತಿದ್ದಂತೆ ವಧು ವರನಿಗೆ ಫೈಟ್; ಗಂಭೀರ ಗಾಯಗೊಂಡ ಮದುಮಗಳು ಸಾವು

- Advertisement -
- Advertisement -

ಕೋಲಾರ; ಪ್ರೀತಿಸಿ ಮದುವೆಯಾಗಿ ಮನೆಗೆ ಬರುತ್ತಿದ್ದಂತೆ ವಧು ಹಾಗೂ ವರನ ಮಧ್ಯೆ ಫೈಟ್ ನಡೆದು ಗಂಭೀರ ಗಾಯಗೊಂಡ ಮದುಮಗಳು ಸಾವನ್ನಪ್ಪಿರುವ ಘಟನೆ ಕೆಜಿಎಫ್ ತಾಲ್ಲೂಕು ಚಂಬರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಿನ್ನೆ  ವಧು ಲಿಖಿತ ಶ್ರೀ ಹಾಗೂ ನವೀನ್ ಮದುವೆಯಾಗಿತ್ತು. ಮದುವೆಯಾದ ಕೆಲ‌ ಗಂಟೆಗಳ ನಂತರ ವಧು, ವರರು ಮನೆಯ ಕೊಠಡಿಗೆ ಹೋಗಿದ್ದಾರೆ. ಕೊಠಡಿ ಹೋದ ಕೆಲ ಹೊತ್ತಿಗೆ ನವೀನ್ ಹಾಗೂ ಲಿಖಿತ ಹೊಡೆದಾಡಿಕೊಂಡಿದ್ದಾರೆ. ಕೊಠಡಿಯಲ್ಲಿ ಇದ್ದ ಮಚ್ಚಿನಿಂದ ನವ ವಧು, ವರರು ಕಿತ್ತಾಡಿದ್ದಾರೆ.

ಹುಡುಗಿ‌ ಲಿಖಿತಶ್ರೀ ಆಂಧ್ರದ ಬೈನಪಲ್ಲಿ‌ ಗ್ರಾಮದವರು. ನವೀನ್ ಕೆಜಿಎಫ್ ತಾಲೂಕು ಚಂಬರಸನಹಳ್ಳಿ ನಿವಾಸಿ. ನವೀನ್ ಹಾಗೂ ಲಿಖಿತ ಇಬ್ಬರು ಪ್ರೀತಿಸಿ ಎರಡೂ ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಿದ್ದರು. ಆದರೆ ಮದುವೆಯಾದ ನಂತರ ಗಲಾಟೆಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಕೆಜಿಎಫ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಲಿಖಿತ ಸಾವನ್ನಪ್ಪಿದ್ರೆ, ನವೀನ್ ಸ್ಥಿತಿ ಇನ್ನೂ ಗಂಭೀರವಾಗಿದೆ.

- Advertisement -

Latest News

error: Content is protected !!