Wednesday, June 3, 2026
Homeಕರಾವಳಿಮಂಗಳೂರು: ಇಷ್ಟವಿಲ್ಲದೇ ಮದುವೆಯಾಗಿದ್ದಕ್ಕೆ ಇಲಿ ಪಾಷಾಣ ಸೇವಿಸಿ ನವವಿವಾಹಿತೆ ಆತ್ಮಹತ್ಯೆ

ಮಂಗಳೂರು: ಇಷ್ಟವಿಲ್ಲದೇ ಮದುವೆಯಾಗಿದ್ದಕ್ಕೆ ಇಲಿ ಪಾಷಾಣ ಸೇವಿಸಿ ನವವಿವಾಹಿತೆ ಆತ್ಮಹತ್ಯೆ

- Advertisement -
- Advertisement -

ಮಂಗಳೂರು; ಇಷ್ಟವಿಲ್ಲದ ವರನನ್ನು ವಿವಾಹವಾಗಿದ್ದಕ್ಕೆ ಮನನೊಂದು ನವವಿವಾಹಿತೆ ಮದುವೆಯಾದ 15 ದಿನಕ್ಕೆ ನೇಣಿಗೆ ಶರಣಾಗಿರುವ ಘಟನೆ ಮಂಗಳೂರಿನ ಅಂಬ್ಲಮೊಗರು ಗ್ರಾಮದ ಕೋಟ್ರಗುತ್ತುವಿನಲ್ಲಿ ನಡೆಿದಿದೆ.ರಶ್ಮಿ ವಿಶ್ವಕರ್ಮ(24) ಮೃತ ದುರ್ದೈವಿ.

ಕಳೆದ ತಿಂಗಳು ಆಗಸ್ಟ್ 21 ರಂದು ರಶ್ಮಿ ಗಂಜಿಮಠ ಮೂಲದ ದುಬೈನಲ್ಲಿ ಉದ್ಯೋಗದಲ್ಲಿರುವ ಇಂಜಿನಿಯರ್ ಸಂದೀಪ್ ಅವರನ್ನು ವಿವಾಹವಾಗಿದ್ದರು. ಏಳು ತಿಂಗಳ ಹಿಂದೆ ಇವರಿಬ್ಬರ ವಿವಾಹ ನಿಶ್ಚಯವಾಗಿತ್ತು.ಆದರೆ ರಶ್ಮಿಗೆ ಈ ವಿವಾಹ ಇಷ್ಟವಿರಲಿಲ್ಲ ಎನ್ನಲಾಗಿದೆ.

ಸೆಪ್ಟಂಬರ್ 3 ರಂದು ಕೋಡಿಕಲ್ ನಲ್ಲಿರುವ ರಶ್ಮಿ ಅವರ ಅಕ್ಕನ ಮನೆಯಲ್ಲಿ ಔತಣಕೂಟವನ್ನು ಏರ್ಪಡಿಸಿದ್ದರು. ಅಲ್ಲಿಗೆ ತೆರಳಿದ್ದ ವೇಳೆ ಆಕೆ ತಾನು ಇಲಿ ಪಾಷಾಣ ಸೇವಿಸಿರೋದಾಗಿ ಹೇಳಿದ್ದಾರೆ. ವಾಂತಿ ಮಾಡಿಕೊಳ್ಳುತ್ತಿದ್ದ ಆಕೆಯನ್ನು ದೇರಳೆಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇದು ಮುಂಜಾನೆ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾರೆ.

ಮದುವೆ ಆದ ಮೇಲೆ ಮುಂಬೈನಲ್ಲಿದ್ದ ಗಂಡನ ಮನೆಗೆ ಹೋಗದೇ ರಶ್ಮಿ ತಾಯಿ ಮನೆಯಲ್ಲಿಯೇ ಇದ್ದರು ಎನ್ನಲಾಗಿದೆ. ಅವರ ಪತಿಯ ಕುಟುಂಬ ಮುಂಬೈನಲ್ಲಿ ನೆಲೆಸಿದ್ದು ರಶ್ಮಿ ಅಲ್ಲಿ ಹೋಗಿರಲಿಲ್ಲ ಎನ್ನಲಾಗಿದೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!