Friday, June 5, 2026
Homeಕರಾವಳಿಬಂಟ್ವಾಳ: ಮಾಡ ದ.ಕ.ಜಿ.ಪಂ.ಹಿ ಪ್ರಾಥಮಿಕ ಶಾಲೆಯ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ...!

ಬಂಟ್ವಾಳ: ಮಾಡ ದ.ಕ.ಜಿ.ಪಂ.ಹಿ ಪ್ರಾಥಮಿಕ ಶಾಲೆಯ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ…!

- Advertisement -
- Advertisement -

ಬಂಟ್ವಾಳ: ದ.ಕ.ಜಿ.ಪಂ.ಹಿ ಪ್ರಾಥಮಿಕ ಶಾಲೆ ಮಾಡ ಬಡಗಕಜೆಕಾರು ಬಂಟ್ವಾಳ ತಾಲೂಕು ಇದರ 2021-2022 ಸಾಲಿನ ನೂತನ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮಾಡ ಶಾಲೆಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಮಾಧವ ಪೂಜಾರಿ ಪಟ್ರಾಡಿ, ಉಪಾಧ್ಯಕ್ಷರಾಗಿ ಶ್ರೀಮತಿ ಜಯಶ್ರೀ ಪುನ್ಕೆದಡಿ ಹಾಗೂ ಹದಿನೆಂಟು ಶಾಲಾ ಪೋಷಕರು ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಸದಸ್ಯರು ಮತ್ತು ಅತಿಥಿಗಳನ್ನು ವಿದ್ಯಾರ್ಥಿಗಳು ವೀಳ್ಯದೆಲೆ ಮತ್ತು ಅಡಿಕೆ ನೀಡುವ ಮೂಲಕ ತುಳುನಾಡ ಸಂಸ್ಕೃತಿಯಂತೆ ವಿಶೇಷವಾಗಿ ಸ್ವಾಗತಿಸಿದರು.

ವೇದಿಕೆಯಲ್ಲಿ ನಿಕಟ ಪೂರ್ವ ಅಧ್ಯಕ್ಷರು, ಹರಿಕೀರ್ತಿ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಪ್ರವೀಣ್ ಪೂಜಾರಿ ಮಾಡ, ಶ್ರೀಮತಿ ಸುಗಂಧಿ ಪಂಚಾಯತ್ ಸದಸ್ಯೆ ಬಡಗ ಕಜೆಕಾರು, ಓಬಯ್ಯ ಮಾಡ, ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಮನ್ಮಥ ಮಾಡ, ಚಂದ್ರ ಹಾಸ, ತಾರಾನಾಥ್, ಧೀರಾಜ್, ವಸಂತ ಪಿತ್ತಿಲು ಕೃಷ್ಣಪ್ಪ ಮಾಡ, ವಸಂತ ನಾಯ್ಕ ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀ ಸೀತಾರಾಮ್ ಮುಖ್ಯ ಶಿಕ್ಷಕರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿಕ್ಷಕಿ ಶ್ರೀಮತಿ ಗೀತಾ ಧನ್ಯವಾದವಿತ್ತರು. ಶಿಕ್ಷಕ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಪ್ರಯುಕ್ತ ಶಾಲಾ ಮಕ್ಕಳಿಗೆ ಮತ್ತು ಇತರರಿಗೆ ಫಲಾಹಾರದ ವ್ಯವಸ್ಥೆಯನ್ನು ನೂತನ ಅಧ್ಯಕ್ಷರು ವ್ಯವಸ್ಥೆ ಮಾಡಿದರು.

- Advertisement -

Latest News

error: Content is protected !!