Saturday, June 6, 2026
Homeತಾಜಾ ಸುದ್ದಿಐದು ದಿನಗಳ ಹಿಂದೆ ಮದುವೆಯಾಗಿದ್ದ ಯುವತಿ ಕೊರೋನಾಗೆ ಬಲಿ

ಐದು ದಿನಗಳ ಹಿಂದೆ ಮದುವೆಯಾಗಿದ್ದ ಯುವತಿ ಕೊರೋನಾಗೆ ಬಲಿ

- Advertisement -
- Advertisement -

ಶಿವಮೊಗ್ಗ: ಕಳೆದ ಐದು ದಿನಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿಯನ್ನು ಮಹಾಮಾರಿ ಕೊರೋನಾದಿಂದ ಮೃತಪಟ್ಟ ಹಿನ್ನಲೆಯಲ್ಲಿ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ಸೂತಕ ಆವರಿಸಿದೆ.

ಮಲವಗೊಪ್ಪದ ಪೂಜಾ ಮೃತ ನವವಿವಾಹಿತೆ. ಮೇ 24ರಂದು ಹರಿಗೆ‌ ನಿವಾಸಿ ಮಹೇಶ್ ಅವರೊಂದಿಗೆ ಪೂಜಾ ಅವರ ವಿವಾಹವಾಗಿತ್ತು.

ಮದುವೆಯಾದ ಮರುದಿನವೇ ಪೂಜಾಗೆ ಜ್ವರ ಕಾಣಿಸಿಕೊಂಡು, ಸ್ಥಳೀಯ ಕ್ಲಿನಿಕ್ ನಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ನಿನ್ನೆ ಜ್ವರ ಜಾಸ್ತಿಯಾಗಿದ್ದರಿಂದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆಯೇ ಪೂಜಾ ಕೊನೆಯುಸಿರೆಳೆದಿದ್ದಾರೆ.

- Advertisement -

Latest News

error: Content is protected !!