Friday, June 5, 2026
Homeತಾಜಾ ಸುದ್ದಿ1 ರಿಂದ 10ನೇ ತರಗತಿ ಮಕ್ಕಳ ಆನ್ ಲೈನ್ ಕ್ಲಾಸ್ ಗೆ ತಜ್ಞರ ಸಮಿತಿಯಿಂದ ಗ್ರೀನ್...

1 ರಿಂದ 10ನೇ ತರಗತಿ ಮಕ್ಕಳ ಆನ್ ಲೈನ್ ಕ್ಲಾಸ್ ಗೆ ತಜ್ಞರ ಸಮಿತಿಯಿಂದ ಗ್ರೀನ್ ಸಿಗ್ನಲ್

- Advertisement -
- Advertisement -

ಬೆಂಗಳೂರು: 1 ರಿಂದ 10ನೇ ತರಗತಿ ಮಕ್ಕಳಿಗೆ ಆನ್ಲೈನ್ ಶಿಕ್ಷಣಕ್ಕೆ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಶಿಫಾರಸು ಮಾಡಿದೆ.

ಆನ್ಲೈನ್ ಶಿಕ್ಷಣದ ಸಂದರ್ಭದಲ್ಲಿ ಮಕ್ಕಳೊಂದಿಗೆ ಪೋಷಕರು ಕಡ್ಡಾಯವಾಗಿ ಇರಬೇಕೆಂದು ಸಮಿತಿ ಹೇಳಿದೆ.

1 -2ನೇ ತರಗತಿಯ ಮಕ್ಕಳಿಗೆ ಪೋಷಕರ ಕಡ್ಡಾಯ ಉಪಸ್ಥಿತಿಯಲ್ಲಿ ಆಟ-ಪಾಠ, ಕಥೆ, ಪ್ರಾಸ ಚಟುವಟಿಕೆಗಳನ್ನು ನಡೆಸಬಹುದು.

3 -5 ನೇ ತರಗತಿ ಮಕ್ಕಳಿಗೆ ವಾರದಲ್ಲಿ 5 ದಿನ 30 ನಿಮಿಷ ಅವಧಿಯ 3 ಆನ್ಲೈನ್ ಕ್ಲಾಸ್ ನಡೆಸಲು ಶಿಫಾರಸು ಮಾಡಲಾಗಿದೆ.

6 -8 ನೇ ತರಗತಿ ಮಕ್ಕಳಿಗೆ ವಾರದಲ್ಲಿ 6 ದಿನ ಆನ್ಲೈನ್ ಕ್ಲಾಸ್ ನಡೆಸಬಹುದು. 30 ರಿಂದ 45 ನಿಮಿಷದ 3 ತರಗತಿ ನಡೆಸಬಹುದು.

ಅದೇ ರೀತಿ 9 ರಿಂದ 10ನೇ ತರಗತಿ ಮಕ್ಕಳಿಗೆ ವಾರದಲ್ಲಿ 6 ದಿನ 30 ರಿಂದ 45 ನಿಮಿಷದ 4 ತರಗತಿ ನಡೆಸಬಹುದೆಂದು ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!