Friday, May 3, 2024
Homeಕರಾವಳಿವಿಟ್ಲ: ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಕೊರೋನಾ, ಪತಿ ಮನೆ ಸೀಲ್ ಡೌನ್

ವಿಟ್ಲ: ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಕೊರೋನಾ, ಪತಿ ಮನೆ ಸೀಲ್ ಡೌನ್

spot_img
- Advertisement -
- Advertisement -

ವಿಟ್ಲ: ಇಲ್ಲಿಯ ಬೊಬ್ಬೆಕೇರಿಯ ಬಾಣಂತಿ ಮಹಿಳೆಗೆ ಕೊರೊನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ವಿಟ್ಲದ ವ ಮಹಿಳೆಯ ಪತಿಯ ಮನೆ ಸೀಲ್ ಡೌನ್ ಮಾಡಲಾಗಿದ್ದು, ಹಾಗೆಯೆ ಮನೆಯ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಗಾ ವಹಿಸಲಾಗಿದೆ.

ವಿಟ್ಲದ ಬೊಬ್ಬೇಕೆರಿ ನಿವಾಸಿ, ಮಹಿಳೆ ಕೆಲವು ದಿನಗಳ ಹಿಂದೆ ದೇರಳಕಟ್ಟೆಯಲ್ಲಿರುವ ತನ್ನ ಮನೆಗೆ ತೆರಳಿದ್ದರು. ಬಳಿಕ ಹೆರಿಗೆಗೆಂದು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಕೋವಿಡ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಪತ್ತೆಯಾಗಿತ್ತು. ವಿಟ್ಲದ ಬೊಬ್ಬೆಕೇರಿಯಲ್ಲಿರುವ ಆಕೆಯ ಪತಿಯ ಮನೆ ಸೀಲ್ ಡೌನ್ ಹಾಗೂ 200 ಮೀಟರ್ ವ್ಯಾಪ್ತಿಯಲ್ಲಿರುವ 38 ಅಂಗಡಿಗಳನ್ನು ನಿಗಾ ವಹಿಸಲಾಗಿದೆ.

ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ಗ್ರಾಮ ಕರಣಿಕ ಪ್ರಕಾಶ್, ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಮನೆ ಸೀಲ್ ಡೌನ್ ಮಾಡಲಾಯಿತು. ಸದ್ಯ ತಾಯಿ ಹಾಗೂ ಮಗು ಆರೋಗ್ಯದಲ್ಲಿದ್ದಾರೆಂದು ಆರೋಗ್ಯ ಇಲಾಖೆ ತಿಳಿಸಿದೆ.

- Advertisement -
spot_img

Latest News

error: Content is protected !!